ನಿಮ್ಮ ಭದ್ರತೆ

ನಾವಿಡುವ ಪ್ರತಿಯೊಂದು ಹೆಜ್ಜೆಯಲ್ಲೂ ನಿಮ್ಮ ಭದ್ರತೆಗೆ ಮೊದಲ ಪ್ರಾಶಸ್ತ್ಯವಿರುತ್ತದೆ.

ನಿಮ್ಮ ಡೇಟಾ ಸುರಕ್ಷಿತವಾಗಿಲ್ಲವೆಂದಾದರೆ, ಅದು ಖಾಸಗಿಯಾಗಿಯೂ ಇರುವುದಿಲ್ಲ. ಆದ್ದರಿಂದ, ನಾವು ಹುಡುಕಾಟ, ನಕ್ಷೆಗಳು ಮತ್ತು YouTube ನಂತಹ Google ಸೇವೆಗಳು ಪ್ರಪಂಚದಲ್ಲಿಯೇ ಅತ್ಯಂತ ಆಧುನಿಕ ಭದ್ರತಾ ವ್ಯವಸ್ಥೆಗಳಿಂದ ಸಂರಕ್ಷಿಸಲ್ಪಟ್ಟಿರುವಂತೆ ನೋಡಿಕೊಳ್ಳುತ್ತೇವೆ.

ರವಾನೆ ಮಾಡುವಾಗ ಎನ್‌ಕ್ರಿಪ್ಶನ್‌ ನಿಮ್ಮ ಡೇಟಾವನ್ನು ಖಾಸಗಿಯಾಗಿ ಇರಿಸುತ್ತದೆ

ಎನ್‌ಕ್ರಿಪ್ಶನ್‌ ನಮ್ಮ ಸೇವೆಗಳಿಗೆ ಉನ್ನತ ಮಟ್ಟದ ಭದ್ರತೆ ಮತ್ತು ಗೌಪ್ಯತೆಯನ್ನು ಒದಗಿಸುತ್ತದೆ. ನೀವು ಇಮೇಲ್ ಕಳುಹಿಸುವುದು, ವೀಡಿಯೊ ಹಂಚಿಕೊಳ್ಳುವುದು, ವೆಬ್‌ಸೈಟ್‌ಗೆ ಭೇಟಿ ನೀಡುವುದು, ಅಥವಾ ನಿಮ್ಮ ಫೋಟೋಗಳನ್ನು ಸಂಗ್ರಹಿಸುವಂತಹ ಕಾರ್ಯಗಳನ್ನು ಮಾಡಿದಾಗ, ನೀವು ರಚಿಸುವ ಡೇಟಾವು ನಿಮ್ಮ ಸಾಧನ, Google ಸೇವೆಗಳು ಮತ್ತು ನಮ್ಮ ಡೇಟಾ ಕೇಂದ್ರಗಳ ನಡುವೆ ಚಲಿಸುತ್ತದೆ. HTTPS ಮತ್ತು ವರ್ಗಾವಣೆ ಲೇಯರ್ ಭದ್ರತೆಯಂತಹ ಪ್ರಮುಖ ಎನ್‌ಕ್ರಿಪ್ಶನ್‌ ತಂತ್ರಜ್ಞಾನ ಸೇರಿದಂತೆ, ನಾವು ಈ ಡೇಟಾವನ್ನು ಬಹು ಲೇಯರ್‌ಗಳ ಭದ್ರತೆಯ ಮೂಲಕ ರಕ್ಷಿಸುತ್ತೇವೆ.

ನಮ್ಮ ಮೇಘ ಮೂಲಸೌಕರ್ಯ ನಿಮ್ಮ ಡೇಟಾವನ್ನು 24/7 ರಕ್ಷಿಸುತ್ತದೆ

ಕಸ್ಟಮ್ ವಿನ್ಯಾಸಗೊಳಿಸಲಾದ ಡೇಟಾ ಕೇಂದ್ರಗಳಿಂದ ಖಂಡಗಳ ನಡುವೆ ಡೇಟಾ ವರ್ಗಾವಣೆ ಮಾಡುವಂತಹ ಸಾಗರದೊಳಿಗಿನ ಫೈಬರ್ ಕೇಬಲ್‌ಗಳವರೆಗೆ, Google ವಿಶ್ವದಲ್ಲೆ ಅತ್ಯಂತ ಸುರಕ್ಷಿತ ಮತ್ತು ಮೇಘ ಮೂಲಭೂತ ವ್ಯವಸ್ಥೆಗಳಲ್ಲಿ ಒಂದನ್ನು ಕಾರ್ಯ ನಿರ್ವಹಣೆ ಮಾಡುತ್ತದೆ. ಮತ್ತು ನಿಮ್ಮ ಡೇಟಾ ರಕ್ಷಿಸಲು ಮತ್ತು ನಿಮಗೆ ಇದರ ಅಗತ್ಯವಿರುವಾಗ ಲಭ್ಯವಿರುವಂತೆ ಮಾಡಲು ಅದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ವಾಸ್ತವವಾಗಿ, ನಾವು ಡೇಟಾವನ್ನು ಬಹು ಡೇಟಾ ಕೇಂದ್ರಗಳಾದ್ಯಂತ ವಿತರಿಸುತ್ತೇವೆ, ಹಾಗಾಗಿ ಬೆಂಕಿ ಅಥವಾ ಅನಾಹುತ ಸಂಭವಿಸಿದಾಗ ಇದನ್ನು ಸ್ವಯಂಚಾಲಿತವಾಗಿ ಮತ್ತು ಎಣೆಯಿಲ್ಲದಂತೆ ಸ್ಥಿರ ಮತ್ತು ಸುರಕ್ಷಿತವಾದ ಸ್ಥಾನಕ್ಕೆ ವರ್ಗಾಯಿಸಬಹುದು.

ನಮ್ಮ ಸೇವೆಗಳನ್ನು ರಕ್ಷಿಸಲು ಅಪಾಯ ಪತ್ತೆ ಹಚ್ಚುವಿಕೆ ಸಹಾಯ ಮಾಡುತ್ತದೆ

ಸ್ಪ್ಯಾಮ್, ಮಾಲ್‌ವೇರ್, ವೈರಸ್‌ಗಳು ಮತ್ತು ದುರುದ್ದೇಶಪೂರಿತ ಕೋಡ್‌ನ ಇತರ ರೂಪಗಳನ್ನು ಒಳಗೊಂಡಂತೆ ಅಪಾಯಗಳಿಂದ ರಕ್ಷಿಸಲು ನಾವು ನಿರಂತರವಾಗಿ ನಮ್ಮ ಸೇವೆಗಳ ಮೇಲೆ ಮತ್ತು ಆಧಾರವಾಗಿರುವ ಮೂಲಸೌಕರ್ಯದ ಮೇಲೆ ನಿಗಾವಹಿಸುತ್ತೇವೆ.

ಸರಕಾರಗಳಿಗೂ ಕೂಡ ನಿಮ್ಮ ಡೇಟಾಗೆ ನೇರ ಪ್ರವೇಶ ಒದಗಿಸುವುದಿಲ್ಲ

ನಿಮ್ಮ ಡೇಟಾ, ಅವಧಿ ಸಂಗ್ರಹಿಸುವ ನಮ್ಮ ಸರ್ವರ್‌ಗಳಿಗೆ ನಾವು "ಹಿಂಬಾಗಿಲಿನ" ಪ್ರವೇಶವನ್ನು ನೀಡುವುದಿಲ್ಲ. ಅಂದರೆ, ಯಾವುದೇ ಸರಕಾರದ ಘಟಕ, U.S. ಅಥವಾ ಬೇರೆಯವು, ನಮ್ಮ ಬಳಕೆದಾರರ ಮಾಹಿತಿಗೆ ನೇರವಾದ ಪ್ರವೇಶವನ್ನು ಹೊಂದಿರುವುದಿಲ್ಲ ಎಂದರ್ಥ. ಕಾನೂನು ಜಾರಿಗೊಳಿಸುವ ಏಜೆನ್ಸಿಗಳಿಂದ ಕೆಲವೊಮ್ಮೆ ಬಳಕೆದಾರ ಡೇಟಾಗಾಗಿ ನಾವು ವಿನಂತಿಗಳನ್ನು ಸ್ವೀಕರಿಸುವ ಸಂದರ್ಭಗಳು ಬರುತ್ತವೆ. ನಮ್ಮ ಕಾನೂನು ತಂಡವು ಈ ವಿನಂತಿಗಳನ್ನು ಪರಿಶೀಲಿಸುತ್ತದೆ ಮತ್ತು ವಿನಂತಿಯು ತುಂಬಾ ದೊಡ್ಡದಾಗಿರುವಾಗ ಅಥವಾ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದಿರುವಾಗ ಹಿಂದಕ್ಕೆ ಕಳುಹಿಸುತ್ತದೆ. ನಮ್ಮ ಪಾರದರ್ಶಕತೆ ವರದಿಯಲ್ಲಿ ಈ ಡೇಟಾ ವಿನಂತಿಗಳ ಕುರಿತು ಮುಕ್ತವಾಗಿರಲು ನಾವು ಶ್ರಮವಹಿಸಿ ಕೆಲಸ ಮಾಡಿದ್ದೇವೆ.

ಐಫೆಲ್ ಟವರ್‌ನ ಫೋಟೋದ ಹೊರಗೆ ಎನ್‌ಕ್ರಿಪ್ಶನ್‌ ವಿಸ್ತರಿಸುತ್ತದೆ

ಇಮೇಲ್‌ಗಳನ್ನು Gmail ಎನ್ಕ್ರಿಪ್ಶನ್ ಖಾಸಗಿಯಾಗಿರಿಸುತ್ತದೆ

ಮೊದಲ ದಿನದಿಂದ, ಎನ್‌ಕ್ರಿಪ್ಟ್ ಮಾಡಲಾದ ಸಂಪರ್ಕಗಳನ್ನು Gmail ಬೆಂಬಲಿಸಿದೆ, ಅದು ನೀವು ಕಳುಹಿಸುತ್ತಿರುವುದನ್ನು ಕೆಟ್ಟ ಜನರು ಓದಲು ಕಠಿಣವಾಗುವಂತೆ ಮಾಡುತ್ತದೆ. ಉದಾಹರಣೆಗೆ ನೀವು ಎನ್‌ಕ್ರಿಪ್ಟ್ ಮಾಡದ ಸಂಪರ್ಕದ ಮೂಲಕ ಕಳುಹಿಸಲಾದ ಇಮೇಲ್ ಅನ್ನು ನೀವು ಸ್ವೀಕರಿಸಿದಾಗ, ಸಂಭಾವ್ಯ ಭದ್ರತಾ ಅಪಾಯಗಳ ಕುರಿತು ನಿಮಗೆ Gmail ಕೂಡಾ ಎಚ್ಚರಿಸುತ್ತದೆ.

Gmail ನ ಇಮೇಲ್ ಎನ್ವೆಲಪ್ ಭದ್ರತೆ ಸ್ಕ್ಯಾನರ್‌ನ ಎಚ್ಚರಿಕೆ ಸಂಕೇತವನ್ನು ಹೊಂದಿಸುತ್ತದೆ

Gmail ಸ್ಪ್ಯಾಮ್ ರಕ್ಷಣೆಯು ಸಂಶಯಾತ್ಮಕ ಇಮೇಲ್‌ಗಳನ್ನು ಫಿಲ್ಟರ್ ಮಾಡುತ್ತದೆ

ಹಲವಾರು ಮಾಲ್‌ವೇರ್ ಮತ್ತು ಫಿಶಿಂಗ್ ಆಕ್ರಮಣಗಳು ಇಮೇಲ್‌ನಿಂದ ಪ್ರಾರಂಭವಾಗುತ್ತವೆ. Gmail ಭದ್ರತೆಯು ಯಾವುದೇ ಇತರ ಇಮೇಲ್ ಸೇವೆಗಿಂತಲೂ ಉತ್ತಮವಾಗಿ ಸ್ಪ್ಯಾಮ್, ಫಿಶಿಂಗ್ ಮತ್ತು ಮಾಲ್‌ವೇರ್‌ನಿಂದ ನಿಮ್ಮನ್ನು ರಕ್ಷಿಸುತ್ತದೆ. ಬಳಕೆದಾರರು ಸ್ಪ್ಯಾಮ್ ಎಂದು ಗುರುತುಮಾಡಿದ ಇಮೇಲ್‌ಗಳ ಗುಣಲಕ್ಷಣಗಳನ್ನು ಗುರುತಿಸಲು ಲಕ್ಷಾಂತರ ಸಂದೇಶಗಳಿಂದ ಪಡೆದ ಮಾದರಿಗಳನ್ನು Gmail ವಿಶ್ಲೇಷಿಸುತ್ತದೆ, ನಂತರ ಅನುಮಾನಾಸ್ಪದ ಅಥವಾ ಅಪಾಯಕಾರಿ ಇಮೇಲ್‌ಗಳು ನಿಮ್ಮನ್ನು ತಲುಪುವ ಮೊದಲೇ ನಿರ್ಬಂಧಿಸಲು ಆ ಗುರುತುಗಳನ್ನು ಬಳಸುತ್ತದೆ. ನೀವು ಸ್ವೀಕರಿಸುವ ಅನುಮಾನಾಸ್ಪದ ಇಮೇಲ್‌ಗಳಿಗೆ "ಸ್ಪ್ಯಾಮ್ ವರದಿ ಮಾಡು" ಆಯ್ಕೆ ಮಾಡುವ ಮೂಲಕ ನೀವು ಸಹಾಯ ಮಾಡಬಹುದು.

ಯಂತ್ರದ ಕಲಿಕೆ ಮತ್ತು ಕೃತಕ ಬುದ್ಧಿವಂತಿಕೆಯು Gmail ನ ಸ್ಪ್ಯಾಮ್ ಫಿಲ್ಟರ್ ಇನ್ನಷ್ಟು ನಿಖರವಾಗಲು ಸಹಾಯ ಮಾಡುತ್ತದೆ. ಇದು ಈಗ ಶೇ.99.9 ರಷ್ಟು ಸ್ಪ್ಯಾಮ್ ಅನ್ನು ನಿಮ್ಮ ಇನ್‌ಬಾಕ್ಸ್‌ನಿಂದ ಹೊರಗೆ ಇರಿಸುತ್ತದೆ.

ಭದ್ರತೆ ಅಪ್‌ಡೇಟ್ ಪ್ರಗತಿಯ ಜೊತೆಗಿನ Chrome ಬ್ರೌಸರ್

Chrome ಸ್ವಯಂಚಾಲಿತವಾಗಿ ನಿಮ್ಮ ಬ್ರೌಸರ್ ಭದ್ರತೆಯನ್ನು ಅಪ್‌ಡೇಟ್‌ ಮಾಡುತ್ತದೆ

ಭದ್ರತಾ ತಂತ್ರಜ್ಞಾನಗಳು ಯಾವಾಗಲೂ ಬದಲಾವಣೆಯಾಗುತ್ತಿರುತ್ತವೆ, ಆದ್ದರಿಂದ ಸುರಕ್ಷಿತವಾಗಿರುವುದು ಎಂದರೆ ನವೀಕೃತವಾಗಿರುವುದು ಎಂದರ್ಥ. ಇತ್ತೀಚಿನ ಭದ್ರತಾ ಪರಿಹಾರಗಳು, ಮಾಲ್‌ವೇರ್ ಹಾಗೂ ಮೋಸಗೊಳಿಸುವ ಸೈಟ್‌ಗಳಿಂದ ರಕ್ಷಣೆಗಳು ಮತ್ತು ಹೆಚ್ಚಿನವುಗಳ ಜೊತೆಗೆ ನೀವು ಬಳಸುತ್ತಿರುವ ಬ್ರೌಸರ್ ಆವೃತ್ತಿ ಅಪ್‌ಡೇಟ್ ಮಾಡಿರುವುದನ್ನು ಖಚಿತ ಪಡಿಸಲು Chrome ನಿರಂತರವಾಗಿ ಪರಿಶೀಲಿಸುತ್ತಿರುತ್ತದೆ. Chrome ಸ್ವಯಂಚಾಲಿತವಾಗಿ ಅಪ್‌ಡೇಟ್‌ ಆಗುತ್ತದೆ, ಆದ್ದರಿಂದ ನಿಮ್ಮನ್ನು ರಕ್ಷಿಸಲು ನೀವು ಇತ್ತೀಚಿನ Chrome ಭದ್ರತಾ ತಂತ್ರಜ್ಞಾನವನ್ನು ಹೊಂದಿರುತ್ತೀರಿ.

ಹಾನಿಕಾರಕ ಅಪ್ಲಿಕೇಶನ್ ಸಾಧನದಲ್ಲಿ ನುಸುಳುತ್ತದೆ

Google Play ಸಂಭಾವ್ಯ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ನಿಮ್ಮ ಫೋನ್‌ನಿಂದ ದೂರ ಇಡುತ್ತದೆ

ನಿಮ್ಮ ಸಾಧನದ ದೊಡ್ಡದಾದ ಭದ್ರತಾ ದೋಷಗಳು ನೀವು ಅದರಲ್ಲಿ ಸ್ಥಾಪಿಸಿದ ಅಪ್ಲಿಕೇಶನ್‌ಗಳು ಆಗಿರಬಹುದು. ಸಂಭಾವ್ಯ ಅಪಾಯಕಾರಿ ಅಪ್ಲಿಕೇಶನ್‌ಗಳು Play Store ತಲುಪುವ ಮೊದಲೇ ನಮ್ಮ ಪತ್ತೆ ಹಚ್ಚುವಿಕೆ ಸಿಸ್ಟಂ ಅವುಗಳನ್ನು ಫ್ಲ್ಯಾಗ್ ಮಾಡುತ್ತದೆ. ಅಪ್ಲಿಕೇಶನ್ ಸುರಕ್ಷಿತವಾಗಿದೆಯೇ ಎಂದು ನಮಗೆ ಖಚಿತವಾಗಿರದಿದ್ದರೆ, Android ಭದ್ರತಾ ತಂಡದ ಸದಸ್ಯರ ಮೂಲಕ ಹಸ್ತಚಾಲಿತವಾಗಿ ಪರಿಶೀಲಿಸಲಾಗುತ್ತದೆ. ನಾವು ನಮ್ಮ ಪತ್ತೆ ಹಚ್ಚುವಿಕೆಯ ಸಿಸ್ಟಂ ಅನ್ನು ಪರಿಷ್ಕರಿಸಿದಂತೆಯೇ, ಈಗಾಗಲೇ Google Play ನಲ್ಲಿರುವ ಅಪ್ಲಿಕೇಶನ್‌ಗಳನ್ನು ನಾವು ಮರುಮೌಲ್ಯೀಕರಿಸುತ್ತೇವೆ ಮತ್ತು ಅಪಾಯಕಾರಿಯಾದವುಗಳನ್ನು ತೆಗೆದುಹಾಕುತ್ತೇವೆ ಆದ್ದರಿಂದ ಅವು ನಿಮ್ಮ ಸಾಧನದಲ್ಲಿ ಇರುವುದಿಲ್ಲ.

ದುರುದ್ದೇಶಪೂರಿತ ಮತ್ತು ದಾರಿತಪ್ಪಿಸುವ ಜಾಹೀರಾತುಗಳನ್ನು Google ನಿರ್ಬಂಧಿಸುತ್ತದೆ

ಮಾಲ್‌ವೇರ್‌, ನೀವು ನೋಡಲು ಬಯಸುವ ವಿಷಯವನ್ನು ಮರೆಮಾಡುವ, ನಕಲಿ ವಸ್ತುಗಳನ್ನು ಪ್ರಚಾರ ಮಾಡುವ ಅಥವಾ ನಮ್ಮ ಜಾಹೀರಾತು ನೀತಿಗಳನ್ನು ಉಲ್ಲಂಘಿಸುವ ಜಾಹೀರಾತುಗಳಿಂದ ನಿಮ್ಮ ಆನ್‌ಲೈನ್‌ ಅನುಭವವು ಕಹಿಯಾಗಿರಬಹುದು. ನಾವು ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಲೈವ್ ವಿಮರ್ಶಕರು ಮತ್ತು ಅತ್ಯಾಧುನಿಕ ಸಾಫ್ಟ್‌ವೇರ್‌ನ ನಮ್ಮ ಸಂಯೋಗವು ಪ್ರತಿ ವರ್ಷ ಸುಮಾರು ದಶಲಕ್ಷದಷ್ಟು ಕೆಟ್ಟ ಜಾಹೀರಾತುಗಳನ್ನು ನಿರ್ಬಂಧಿಸುತ್ತದೆ. ನಿಮಗೆ ಆಕ್ಷೇಪಾರ್ಹ ಜಾಹೀರಾತುಗಳನ್ನು ವರದಿ ಮಾಡಲು ಮತ್ತು ನೀವು ನೋಡಲು ಬಯಸುವ ಜಾಹಿರಾತುಗಳ ಪ್ರಕಾರಗಳನ್ನು ನಿಯಂತ್ರಿಸಲು ನಾವು ಸಹ ಉಪಕರಣಗಳನ್ನು ನೀಡುತ್ತೇವೆ. ಮತ್ತು ಎಲ್ಲರಿಗೂ ಇಂಟರ್‌ನೆಟ್ ಅನ್ನು ಸುರಕ್ಷಿತವನ್ನಾಗಿಸಿ ಸಹಾಯ ಮಾಡಲು ನಾವು ಸಕ್ರಿಯವಾಗಿ ನಮ್ಮ ಒಳನೋಟಗಳನ್ನು ಮತ್ತು ಅತ್ಯುತ್ತಮ ವರ್ತನೆಗಳನ್ನು ಪ್ರಕಟಿಸುತ್ತೇವೆ.

ಅನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡುವ ಉನ್ನತ ಸಲಹೆಗಳು

ಈ ತ್ವರಿತ ಸಲಹೆಗಳ ಮೂಲಕ ನಿಮ್ಮ ಅನ್‌ಲೈನ್‌ ಖಾತೆಗಳು ಮತ್ತು ವೈಯಕ್ತಿಕ ಡೇಟಾವನ್ನು ಸುರಕ್ಷಿತವಾಗಿರಿಸಿಕೊಳ್ಳಿ.

  • ನಿಮ್ಮ ಸಾಧನಗಳನ್ನು ಸಂರಕ್ಷಿಸಿ

  • ಫಿಶಿಂಗ್ ಪ್ರಯತ್ನಗಳನ್ನು ತಪ್ಪಿಸಿ

  • ಇಂಟರ್‌ನೆಟ್ ಅನ್ನು ಸುರಕ್ಷಿತವಾಗಿ ಬ್ರೌಸ್ ಮಾಡಿ

Google ಭದ್ರತಾ ಶೀಲ್ಡ್ ಮತ್ತು ಪರಿಶೀಲನಾಪಟ್ಟಿ

ಸದೃಢವಾದ ಪಾಸ್‌ವರ್ಡ್‌ ರಚಿಸಿ

ನಿಮ್ಮ ಆನ್‌ಲೈನ್‌ ಖಾತೆಗಳನ್ನು ರಕ್ಷಿಸುವಾಗ ನೀವು ತೆಗೆದುಕೊಳ್ಳಬಹುದಾದ ಅತ್ಯಂತ ಕ್ಲಿಷ್ಟಕರ ಹಂತ ಬಲವಾದ ಮತ್ತು ಸುರಕ್ಷಿತವಾದ ಪಾಸ್‌ವರ್ಡ್‌ ರಚಿಸುವುದು. ನೀವು ಮರೆಯದಿರುವ ಪದಗಳ ಸರಣಿಯನ್ನು ಬಳಸಿ ಇದನ್ನು ಮಾಡಬಹುದು, ಆದರೆ ಬೇರೆಯವರಿಗೆ ಊಹಿಸಲು ಕಷ್ಟವಾಗುತ್ತದೆ. ಅಥವಾ ಉದ್ದ ವಾಕ್ಯವನ್ನು ತೆಗೆದುಕೊಳ್ಳಿ ಮತ್ತು ಅದರ ಪ್ರತಿ ಮೊದಲ ಅಕ್ಷರಗಳನ್ನು ಜೋಡಿಸಿ ಪಾಸ್‌ವರ್ಡ್‌ ರಚಿಸಿ. ಇದನ್ನು ಇನ್ನೂ ಸದೃಢಪಡಿಸಲು, ಕನಿಷ್ಠ 8 ಅಕ್ಷರಗಳ ಉದ್ದದಷ್ಟು ಮಾಡಿ, ಏಕೆಂದರೆ ನಿಮ್ಮ ಉದ್ದನೆಯ ಪಾಸ್‌ವರ್ಡ್‌ ಬಲಯುತವಾಗಿರುತ್ತದೆ.

ಸುರಕ್ಷತಾ ಪ್ರಶ್ನೆಗಳಿಗೆ ಉತ್ತರಗಳನ್ನು ರಚಿಸಲು ಕೇಳಿದರೆ, ಊಹಿಸಲು ಇನ್ನಷ್ಟು ಕಷ್ಟವಾಗಲು ನಕಲಿ ಉತ್ತರಗಳನ್ನು ಬಳಸಿ.

ಎಂದಿಗೂ ಒಂದೇ ರೀತಿಯ ಪಾಸ್‌ವರ್ಡ್‌ನ್ನು ಎರಡು ಬಾರಿ ಬಳಸಬೇಡಿ

ಪ್ರತಿಯೊಂದು ಖಾತೆಗೆ ಅನನ್ಯ ಪಾಸ್‌ವರ್ಡ್‌ ಅನ್ನು ರಚಿಸಿ

ನಿಮ್ಮ Google ಖಾತೆ, ಸಾಮಾಜಿಕ ಮಾಧ್ಯಮ ಮತ್ತು ಚಿಕ್ಕ ವೆಬ್‌ಸೈಟ್‌ಗಳಂತಹ ಬಹು ಖಾತೆಗಳಿಗೆ ಲಾಗಿನ್‌ ಮಾಡಲು ಒಂದೇ ರೀತಿಯ ಪಾಸ್‌ವರ್ಡ್‌ಗಳನ್ನು ಬಳಸುವುದರಿಂದ ನಿಮ್ಮ ಸುರಕ್ಷತಾ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ಮನೆ, ಕಾರು ಮತ್ತು ಕಚೇರಿಗಳನ್ನು ಲಾಕ್ ಮಾಡಲು ಒಂದೇ ರೀತಿಯ ಕೀಗಳನ್ನು ಬಳಸಬಹುದು – ಅವುಗಳಲ್ಲಿ ಯಾವುದಾದರೂ ಒಂದಕ್ಕೆ ಪ್ರವೇಶ ಪಡೆದರೆ, ಎಲ್ಲವುಗಳನ್ನು ಪ್ರವೇಶಿಸುವ ಸಾಧ್ಯತೆಯಿರುತ್ತದೆ.

ಒಂದು ಅಥವಾ ಹೆಚ್ಚು ಪಾಸ್‌ವರ್ಡ್‌ಗಳನ್ನು ಟ್ರ್ಯಾಕ್‌‌ ಮಾಡಿ

ನಿಮ್ಮ ವಿವಿಧ ಆನ್‌ಲೈನ್‌ ಖಾತೆಗಳಿಗಾಗಿ Chrome ಬ್ರೌಸರ್‌ನಲ್ಲಿ Google ಸ್ಮಾರ್ಟ್ ಲಾಕ್ ರೀತಿಯ ಪಾಸ್‌ವರ್ಡ್‌ ನಿರ್ವಾಹಕ ನಿಮ್ಮನ್ನು ರಕ್ಷಿಸಲು ಮತ್ತು ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳನ್ನು ಟ್ರ್ಯಾಕ್ ಮಾಡುತ್ತಿರಲು ಸಹಾಯ ಮಾಡುತ್ತದೆ. ಸುರಕ್ಷತಾ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳನ್ನು ಸಹ ಟ್ರ್ಯಾಕ್ ಮಾಡಬಹುದು ಮತ್ತು ನಿಮಗಾಗಿ ಯಾದೃಚ್ಛಿಕ ಪಾಸ್‌ವರ್ಡ್‌ಗಳನ್ನು ರಚಿಸಬಹುದು.

2-ಹಂತದ ಪರಿಶೀಲನೆಯನ್ನು ಮಾಡುವ ಮೂಲಕ ಹ್ಯಾಕರ್‌ಗಳ ವಿರುದ್ಧ ಸಂರಕ್ಷಿಸಿಕೊಳ್ಳಿ

ನಿಮ್ಮ ಖಾತೆಗೆ ಪ್ರವೇಶಿಸಲು ನಿಮ್ಮ ಬಳಕೆದಾರಹೆಸರು ಮತ್ತು ಪಾಸ್ವರ್ಡ್ ಮೇಲಿನ ದ್ವಿತೀಯ ಅಂಶವನ್ನು ಬಳಸಲು ನಿಮಗೆ ಅಗತ್ಯವಿರುವುದರಿಂದ ನಿಮ್ಮ ಖಾತೆಗೆ ಪ್ರವೇಶವನ್ನು ಹೊಂದಿರದವರನ್ನು ಹೊರಗಿಡಲು 2-ಹಂತದ ಪರಿಶೀಲನೆ ಸಹಾಯ ಮಾಡುತ್ತದೆ. Google ಮೂಲಕ, ಉದಾಹರಣೆಗೆ, ವಿಶ್ವಾಸಾರ್ಹ ಸಾಧನದಿಂದ ಲಾಗಿನ್ ಅನ್ನು ಸ್ವೀಕರಿಸಲು Google ಅಥೆಂಟಿಕೇಟರ್ ಅಪ್ಲಿಕೇಶನ್‌ ಅಥವಾ ನಿಮ್ಮ Google ಅಪ್ಲಿಕೇಶನ್‌ನಲ್ಲಿನ ಪ್ರಾಂಪ್ಟ್‌ನಿಂದ ರಚಿಸಲಾದ ಆರು-ಅಂಕಿಯ ಕೋಡ್ ಆಗಿರಬಹುದು.

ಫಿಶಿಂಗ್ ವಿರುದ್ಧ ಹೆಚ್ಚಿನ ರಕ್ಷಣೆಗಾಗಿ, ನಿಮ್ಮ ಕಂಪ್ಯೂಟರ್‌ನ USB ಪೋರ್ಟ್‌ನಲ್ಲಿ ಒಳಸೇರಿಸುವ ಸುರಕ್ಷತಾ ಕೀಯನ್ನು ಹಾಗೂ NFC (ಹತ್ತಿರದ ಕ್ಷೇತ್ರ ಸಂವಹನ) ಅಥವಾ ಬ್ಲೂಟೂತ್‌ ಬಳಸಿಕೊಂಡು ನಿಮ್ಮ ಮೊಬೈಲ್ ಸಾಧನಕ್ಕೆ ಸಂಪರ್ಕಿಸುವ ಭೌತಿಕ ಸುರಕ್ಷತಾ ಕೀಯನ್ನು ನೀವು ಬಳಸಬಹುದು.

ನಿಮ್ಮ ಸಾಫ್ಟ್‌ವೇರ್ ಅನ್ನು ಕಾಲಕ್ಕೆ ತಕ್ಕಂತೆ ಇರಿಸಿಕೊಳ್ಳಿ

ಸುರಕ್ಷತಾ ಲೋಪಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ನಿಮ್ಮ ವೆಬ್‌ ಬ್ರೌಸರ್, ಆಪರೇಟಿಂಗ್ ಸಿಸ್ಟಂ, ಪ್ಲಗ್‌‌ಇನ್‌‌ಗಳು ಅಥವಾ ಡಾಕ್ಯುಮೆಂಟ್ ಎಡಿಟರ್‌ಗಳಾದ್ಯಂತ ಯಾವಾಗಲು ಅಪ್-ಟು-ಡೇಟ್ ಸಾಫ್ಟ್‌ವೇರ್ ಬಳಸಿ. ನಿಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್‌ ಮಾಡಲು ಅಧಿಸೂಚನೆಗಳನ್ನು ಸ್ವೀಕರಿಸಿದಾಗ, ನೀವು ಸಾಧ್ಯವಾದಷ್ಟು ಬೇಗನೆ ಅಪ್‌ಡೇಟ್‌ ಮಾಡಿ.

ನೀವು ಯಾವಾಗಲೂ ಲಭ್ಯವಿರುವ ಇತ್ತೀಚಿನ ಆವೃತ್ತಿಗಳನ್ನು ಬಳುಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನೀವು ಸಾಮಾನ್ಯವಾಗಿ ಬಳುಸುವ ಸಾಫ್ಟ್‌ವೇರ್ ಅನ್ನು ಪರಿಶೀಲಿಸಿ. Chrome ಬ್ರೌಸರ್ ಸೇರಿದಂತೆ ಕೆಲವು ಸೇವೆಗಳು, ಸ್ವಯಂಚಾಲಿತವಾಗಿ ತಮ್ಮಷ್ಟಕ್ಕೆ ತಾವೇ ಅಪ್‌ಡೇಟ್‌ ಆಗುತ್ತವೆ.

ಪರದೆ ಲಾಕ್‌ ಬಳಸಿ

ನೀವು ನಿಮ್ಮ ಕಂಪ್ಯೂಟರ್‌,ಲ್ಯಾಪ್‌ಟಾಪ್, ಟ್ಯಾಬ್ಲೆಟ್‌‌ ಅಥವಾ ಫೋನ್‌ ಅನ್ನು ಬಳಸದೆ ಇದ್ದಲ್ಲಿ, ನಿಮ್ಮ ಸಾಧನಕ್ಕೆ ಬೇರೆ ಯಾರು ಪ್ರವೇಶಿಸದಂತೆ ನಿಮ್ಮ ಪಾರದೆಯನ್ನು ಲಾಕ್‌ ಮಾಡಿ. ಹೆಚ್ಚುವರಿ ಸುರಕ್ಷತೆಗಾಗಿ, ನಿಮ್ಮ ಸಾಧನವು ನಿದ್ರಾವಸ್ಥೆಗೆ ಹೋದಾಗ ಸ್ವಯಂಚಾಲಿತವಾಗಿ ಲಾಕ್‌ ಮಾಡುವುದಕ್ಕಾಗಿ ಸಾಧನ ಹೊಂದಿಸಿ.

ನೀವು ಅದನ್ನು ಕಳೆದುಕೊಂಡರೆ ನಿಮ್ಮ ಫೋನ್ ಅನ್ನು ಲಾಕ್ ಮಾಡಿ

ನಿಮ್ಮ ಫೋನ್‌ ಯಾವಾಗಲಾದರೂ ಕಳೆದುಹೋಗಿದ್ದಲ್ಲಿ ಅಥವಾ ಕಳ್ಳತನವಾಗಿದ್ದಲ್ಲಿ, ನನ್ನ ಖಾತೆಗೆ ಭೇಟಿ ನೀಡಿ ಮತ್ತು ಕೆಲವು ತ್ವರಿತ ಹಂತಗಳಲ್ಲಿ ನಿಮ್ಮ ಡೇಟಾವನ್ನು ರಕ್ಷಿಸಲು "ನಿಮ್ಮ ಫೋನ್‌ ಹುಡುಕಿ" ಎಂಬುವುದನ್ನು ಆಯ್ಕೆಮಾಡಿ. ನೀವು Android ಅಥವಾ iOS ಸಾಧನವನ್ನು ಹೊಂದಿದ್ದಲ್ಲಿ, ನೀವು ದೂರದಿಂದಲೇ ಗುರುತಿಸಬಹುದು ಮತ್ತು ನಿಮ್ಮ ಫೋನ್‌ ಅನ್ನು ಲಾಕ್‌ ಮಾಡಬಹುದು, ಆದ್ದರಿಂದ ನಿಮ್ಮ ಫೋನ್‌ ಅನ್ನು ಬೇರೆ ಯಾರು ಬಳಸಲು ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸಲು ಸಾಧ್ಯವಿಲ್ಲ.

Chromeನಲ್ಲಿ ರಕ್ಷಿಸಲಾದ ಪಾಸ್‌ವರ್ಡ್‌ಗಳನ್ನು ಬ್ರೌಸರ್ ತೋರಿಸುತ್ತದೆ

ನಿಮ್ಮ ಫೋನ್‌ನಲ್ಲಿನ ಸಂಭಾವ್ಯ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಆಫ್‌ ಮಾಡಿ ಇರಿಸಿಕೊಳ್ಳಿ

ನೀವು ನಂಬುವ ಮೂಲದ ಮೂಲಕ ಯಾವಾಗಲೂ ನಿಮ್ಮ ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ. Android ಸಾಧನಗಳ ಮೂಲಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುವುದಕ್ಕಾಗಿ, Google Play ಸ್ಟೋರ್‌ನಿಂದ ಅವುಗಳನ್ನು ಡೌನ್‌ಲೋಡ್‌ ಮಾಡುವ ಮೊದಲು Google Play ರಕ್ಷಣೆಯು ಅಪ್ಲಿಕೇಶನ್‌ಗಳ ಮೇಲೆ ಸುರಕ್ಷತಾ ಪರಿಶೀಲನೆಯನ್ನು ಚಾಲನೆ ಮಾಡುತ್ತದೆ ಮತ್ತು ಇತರ ಮೂಲಗಳಿಂದ ಅಪಾಯ ಉಂಟಾಗುವ ಅಪ್ಲಿಕೇಶನ್‌ಗಳಿಗೆ ನಿಮ್ಮ ಸಾಧನವನ್ನು ನಿಯತಕಾಲಿಕವಾಗಿ ಪರಿಶೀಲಿಸುತ್ತದೆ.

ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು:

  • ನಿಮ್ಮ ಅಪ್ಲಿಕೇಶನ್‌ಗಳನ್ನು ಪರಿಶೀಲಿಸಿ ಮತ್ತು ನೀವು ಬಳಸದಿರುವುಗಳನ್ನು ಅಳಿಸಿ
  • ನಿಮ್ಮ ಅಪ್ಲಿಕೇಷನ್ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಸ್ವಯಂ-ಅಪ್‌ಡೇಟ್‌ಗಳನ್ನು ಸಕ್ರಿಯಗೊಳಿಸಿ
  • ನೀವು ನಂಬುವ ಅಪ್ಲಿಕೇಶನ್‌ಗಳಿಗೆ ನಿಮ್ಮ ಸ್ಥಳ ಮತ್ತು ಫೋಟೋಗಳಂತಹ ಸೂಕ್ಷ್ಮ ಡೇಟಾಕ್ಕೆ ಮಾತ್ರ ಪ್ರವೇಶವನ್ನು ನೀಡಿ

ಇಮೇಲ್‌ ಸ್ಕ್ಯಾಮ್‌ಗಳು, ನಕಲಿ ಬಹುಮಾನಗಳು ಮತ್ತು ಉಡುಗೊರೆಗಳ ಬಗ್ಗೆ ಎಚ್ಚರವಿರಲಿ

ನೀವು ಏನಾದರೂ ಗೆದ್ದಿರುವಿರಿ, ಸಮೀಕ್ಷೆಯನ್ನು ಪೂರ್ಣಗೊಳಿಸುವುದಕ್ಕಾಗಿ ಬಹುಮಾನಗಳನ್ನು ನೀಡುತ್ತಿದ್ದಾರೆ ಅಥವಾ ಹಣವನ್ನು ಗಳಿಸುವ ತ್ವರಿತ ಮಾರ್ಗಗಳನ್ನು ಪ್ರಚಾರ ಮಾಡುವ ರೀತಿಯಲ್ಲೇ, ಅಪರಿಚಿತರಿಂದ ಸಂದೇಶಗಳು ಯಾವಾಗಲೂ ಅನುಮಾನಾಸ್ಪದವಾಗಿರುತ್ತವೆ, ವಿಶೇಷವಾಗಿ ಅವರು ನಿಜವಾಗಲೂ ತುಂಬಾ ಉತ್ತಮವೆಂದು ತೋರುತ್ತಿರುತ್ತವೆ. ಅನುಮಾನಾಸ್ಪದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್‌ ಮಾಡಬೇಡಿ ಮತ್ತು ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಪ್ರಶ್ನಾರ್ಹ ಫಾರ್ಮ್‌ಗಳು ಮತ್ತು ಸಮೀಕ್ಷೆಗಳಿಗೆ ನಮೂದಿಸ ಬೇಡಿ.

ವೈಯಕ್ತಿಕ ಮಾಹಿತಿಕ್ಕಾಗಿ ವಿನಂತಿಸುವಾಗ ಎಚ್ಚರವಿರಲಿ

ಪಾಸ್‌ವರ್ಡ್‌, ಬ್ಯಾಂಕ್‌ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಅಥವಾ ನಿಮ್ಮ ಹುಟ್ಟುಹಬ್ಬದಂತಹ ವೈಯಕ್ತಿಕ ಮಾಹಿತಿಯನ್ನು ಕೇಳುವ ಅನುಮಾನಾಸ್ಪದ ಇಮೇಲ್‌ಗಳು, ತ್ವರಿತ ಸಂದೇಶಗಳು ಅಥವಾ ಪಾಪ್-ಅಪ್ ವಿಂಡೋಗಳಿಗೆ ಪ್ರತ್ಯುತ್ತರ ನೀಡಬೇಡಿ. ನಿಮ್ಮ ಬ್ಯಾಂಕ್‌ನಂತಹ ನೀವು ನಂಬುವ ಸೈಟ್‌ ಮೂಲಕ ಸಂದೇಶವು ಬಂದಿದ್ದರೂ ಸಹ, ಎಂದಿಗೂ ಲಿಂಕ್‌ ಅನ್ನು ಕ್ಲಿಕ್‌ ಮಾಡಬೇಡಿ ಹಾಗೂ ಸಂದೇಶದ ಪ್ರತ್ಯುತ್ತರವನ್ನು ಕಳಿಸಬೇಡಿ. ನಿಮ್ಮ ಖಾತೆಗೆ ಲಾಗಿನ್‌ ಮಾಡಲು ಅವರ ವೆಬ್‌ಸೈಟ್‌ ಅಥವಾ ಅಪ್ಲಿಕೇಶನ್‌ಗೆ ನೇರವಾಗಿ ಹೋಗುವುದು ಉತ್ತಮವಾಗಿದೆ.

ನೆನಪಿನಲ್ಲಿಡಿ, ನೀವು ಇಮೇಲ್‌ ಮೂಲಕ ಪಾಸ್‌ವರ್ಡ್‌ಗಳು ಅಥವಾ ಹಣಕಾಸು ಮಾಹಿತಿಯನ್ನು ಕಳುಹಿಸಿದ್ದಾಗ ಕಾನೂನುಬದ್ಧ ಸೈಟ್‌ಗಳು ಮತ್ತು ಸೇವೆಗಳು ಸಂದೇಶಗಳ ಮನವಿಯನ್ನು ಕಳುಹಿಸುವುದಿಲ್ಲ.

ಅನುಕರಣಕಾರರನ್ನು ವೀಕ್ಷಿಸಿ

ನಿಮಗೆ ತಿಳಿದಿರುವ ಯಾರಾದರೂ ನಿಮಗೆ ಇಮೇಲ್‌ಗಳನ್ನು ಕಳುಹಿಸಿದ್ದಲ್ಲಿ, ಆದರೆ ಸಂದೇಶವು ಬೆಸವಾಗಿ ತೋರುತ್ತದೆ, ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿರಬಹುದು.

ತಿಳಿದುಕೊಳ್ಳುವುದಕ್ಕಾಗಿ:

  • ಹಣಕ್ಕಾಗಿ ತುರ್ತು ವಿನಂತಿಗಳು
  • ಕ್ಲೈಮ್‌ ಮಾಡಿರುವ ವ್ಯಕ್ತಿಯು ಬೇರೊಂದು ದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ
  • ಫೋನ್‌ ಕಳ್ಳತನವಾಗಿದೆ ಮತ್ತು ಕರೆ ಮಾಡಲು ಸಾಧ್ಯವಿಲ್ಲ ಎಂದು ವ್ಯಕ್ತಿಯು ಹೇಳುತ್ತಿದ್ದಾನೆ

ಇಮೇಲ್‌ ಕಾನೂನುಬದ್ಧವಾಗಿದೆ ಎಂದು ದೃಢೀಕರಿಸುವವರಿಗೂ ಯಾವುದೇ ಸಂದೇಶಗಳಿಗೆ ಅಥವಾ ಲಿಂಕ್‌ಗಳಿಗೆ ನೀವು ಪ್ರತ್ಯುತ್ತರ ನೀಡಬೇಡಿ.

ಡೌನ್‌ಲೋಡ್‌ ಮಾಡುವ ಮೊದಲು ಫೈಲ್‌ಗಳನ್ನು ಎರಡುಬಾರಿ ಪರಿಶೀಲಿಸಿ

ಸೋಂಕಿತ ದಾಖಲೆಗಳು ಮತ್ತು PDF ಲಗತ್ತುಗಳ ಮೂಲಕ ಕೇಲವು ಅತ್ಯಾಧುನಿಕ ಫಿಶಿಂಗ್ ದಾಳಿಗಳು ಸಂಭವಿಸಬಹುದು. ನೀವು ಅನುಮಾನಾಸ್ಪದ ಲಗತ್ತನ್ನು ನೋಡಿದರೆ, ಸುರಕ್ಷಿತವಾಗಿ ತೆರೆಯಲು Chrome ಅಥವಾ Google ಡ್ರೈವ್ ಅನ್ನು ಬಳಸಿ ಮತ್ತು ನಿಮ್ಮ ಸಾಧನವನ್ನು ಸೋಂಕುವ ಅಪಾಯವನ್ನು ಕಡಿಮೆ ಮಾಡಿ. ನಾವು ವೈರಸ್ ಅನ್ನು ಪತ್ತೆ ಹಚ್ಚಿದರೆ, ನಿಮಗೆ ಎಚ್ಚರಿಕೆಯನ್ನು ತೋರಿಸುತ್ತೇವೆ.

ಸುರಕ್ಷತಾ ನೆಟ್‌ವರ್ಕ್‌ಗಳನ್ನು ಬಳಸಿ

ಸಾರ್ವಜನಿಕ ಅಥವಾ ಉಚಿತ ವೈಫೈ ಬಳಸುವ ಬಗ್ಗೆ ಜಾಗರೂಕರಾಗಿರಿ, ಅವುಗಳಿಗೂ ಸಹ ಪಾಸ್‌ವರ್ಡ್‌ನ ಅಗತ್ಯವಿರುತ್ತದೆ. ನೀವು ಸಾರ್ವಜನಿಕ ನೆಟ್‌ವರ್ಕ್‌ಗೆ ಸಂಪರ್ಕಸಿದಾಗ, ಸಮೀಪದ ಯಾರಿಗಾದರೂ ನೀವು ಭೇಟಿ ನೀಡುವ ವೆಬ್‌ಸೈಟ್‌ಗಳಿಗೆ ಮತ್ತು ನೀವು ಸೈಟ್‌ಗಳಿಗೆ ಟೈಪ್ ಮಾಡುವ ಮಾಹಿತಿಗಳಂತಹ ನಿಮ್ಮ ಇಂಟರ್ನೆಟ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬಹುದು. ಸಾರ್ವಜನಿಕ ಅಥವಾ ಉಚಿತ ವೈಫೈ ನಿಮ್ಮ ಏಕೈಕ ಆಯ್ಕೆಯಾಗಿದ್ದರೆ, ಸೈಟ್ ಸುರಕ್ಷಿತವಾಗಿದ್ದರೆ Chrome ಬ್ರೌಸರ್ ವಿಳಾಸ ಪಟ್ಟಿಯಲ್ಲಿ ನಿಮಗೆ ತಿಳಿಸುತ್ತದೆ.

ಸೂಕ್ಷ್ಮ ಮಾಹಿತಿಯನ್ನು ನಮೂದಿಸುವ ಮೊದಲು ಸುರಕ್ಷತಾ ಸಂಪರ್ಕಗಳನ್ನು ವೀಕ್ಷಿಸಿ

ನೀವು ವೆಬ್ ಬ್ರೌಸ್ ಮಾಡುತ್ತಿರುವಾಗ – ಮತ್ತು ಪಾಸ್‌ವರ್ಡ್‌ ಅಥವಾ ಕ್ರೆಡಿಟ್‌ ಕಾರ್ಡ್‌ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ನಮೂದಿಸಲು ನೀವು ಯೋಜಿಸಿದ್ದರೆ – ನೀವು ಭೇಟಿ ನೀಡುವ ಸೈಟ್‌ಗಳ ಸಂಪರ್ಕವು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. HTTPS ಜೊತೆ ಸುರಕ್ಷಿತ URL ಪ್ರಾರಂಭವಾಗುತ್ತದೆ. Chrome ಬ್ರೌಸರ್ URL ಕ್ಷೇತ್ರದಲ್ಲಿ ಹಸಿರು ಬಣ್ಣವನ್ನು ಮತ್ತು ಸಂಪೂರ್ಣವಾಗಿ ಲಾಕ್ ಮಾಡಿದ ಐಕಾನ್ ಅನ್ನು ತೋರಿಸುತ್ತದೆ ಮತ್ತು "ಸುರಕ್ಷಿತವಾಗಿದೆ" ಎಂದು ಹೇಳುತ್ತದೆ. ಇದು ಸುರಕ್ಷಿತವಾಗಿಲ್ಲದಿದ್ದರೆ, ಅದನ್ನು "ಸುರಕ್ಷಿತವಾಗಿಲ್ಲ" ಎಂದು ಓದುತ್ತದೆ. ನೀವು ಭೇಟಿ ನೀಡುವ ವೆಬ್‌ಸೈಟ್‌ಗಳ ಮೂಲಕ ನಿಮ್ಮ ಬ್ರೌಸರ್ ಅಥವಾ ಅಪ್ಲಿಕೇಶನ್ ಅನ್ನು ಸುರಕ್ಷಿತವಾಗಿ ಸಂಪರ್ಕಿಸುವ ಮೂಲಕ ನಿಮ್ಮ ಬ್ರೌಸಿಂಗ್‌ ಅನ್ನು ಸುರಕ್ಷಿತವಾಗಿರಿಸಲು HTTPS ಸಹಾಯ ಮಾಡುತ್ತದೆ.