ನಿಮ್ಮ ಡೇಟಾ

ಯಾವ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎನ್ನುವುದು ನಿಮಗೆ ತಿಳಿದಿರಬೇಕು ಎಂಬುದು ಬಯಕೆ.

ನೀವು Google ಸೇವೆಗಳನ್ನು ಬಳಸುವಾಗ, ನಿಮ್ಮ ಡೇಟಾವನ್ನು ನಮಗೆ ಹಸ್ತಾಂತರಿಸಿರುತ್ತೀರಿ. ನಮ್ಮ ಸೇವೆಗಳು ನಿಮಗಾಗಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ನಾವು ಏನು ಸಂಗ್ರಹಿಸುತ್ತೇವೆ ಮತ್ತು ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಸ್ಪಷ್ಟವಾಗಿರುವುದು ನಮ್ಮ ಹೊಣೆಗಾರಿಕೆಯಾಗಿದೆ.

ನಾವು ಸಂಗ್ರಹಿಸುವ ಡೇಟಾದ ಮೂರು ಮುಖ್ಯ ಪ್ರಕಾರಗಳು ಇಲ್ಲಿವೆ:

ನೀವು ಮಾಡಬೇಕಾದ ವಿಷಯಗಳು

ನಮ್ಮ ಸೇವೆಗಳನ್ನು ನೀವು ಬಳಸುವಾಗ — ಉದಾಹರಣೆಗೆ Google ನಲ್ಲಿ ಹುಡುಕಾಟ ಮಾಡುವುದು, Google ನಕ್ಷೆಗಳಲ್ಲಿ ಗಮ್ಯಸ್ಥಾನಗಳನ್ನು ಪಡೆಯುವುದು ಅಥವಾ YouTube ನಲ್ಲಿ ವೀಡಿಯೊ ವೀಕ್ಷಿಸುವುದು — ಈ ಸೇವೆಗಳು ನಿಮಗಾಗಿ ಕೆಲಸ ಮಾಡಲು ನಾವು ಡೇಟಾವನ್ನು ಸಂಗ್ರಹಿಸುತ್ತೇವೆ. ಅದು ಇದೆಲ್ಲವನ್ನೂ ಒಳಗೊಂಡಿರಬಹುದು:

 • ನೀವು ಹುಡುಕುವಂತಹ ವಿಷಯಗಳು
 • ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು
 • ನೀವು ವೀಕ್ಷಿಸುವ ವೀಡಿಯೊಗಳು
 • ನೀವು ಕ್ಲಿಕ್ ಮಾಡುವ ಅಥವಾ ಟ್ಯಾಪ್ ಮಾಡುವ ಜಾಹೀರಾತುಗಳು
 • ನಿಮ್ಮ ಸ್ಥಳ
 • ಸಾಧನ ಮಾಹಿತಿ
 • ಐಪಿ ವಿಳಾಸ ಮತ್ತು ಕುಕೀ ಡೇಟಾ

ನೀವು ರಚಿಸುವ ವಿಷಯಗಳು

ನಿಮ್ಮ Google ಖಾತೆಯ ಮೂಲಕ ನೀವು ಸೈನ್ ಇನ್ ಮಾಡಿದಲ್ಲಿ, ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ರಚಿಸಿದ್ದನ್ನು ನಾವು ಸಂಗ್ರಹಿಸುತ್ತೇವೆ ಮತ್ತು ರಕ್ಷಿಸುತ್ತೇವೆ. ಅದು ಇದೆಲ್ಲವನ್ನೂ ಒಳಗೊಂಡಿರಬಹುದು:

 • Gmail ರಲ್ಲಿ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
 • ನೀವು ಸೇರಿಸುವ ಸಂಪರ್ಕಗಳು
 • ಕ್ಯಾಲೆಂಡರ್ ಈವೆಂಟ್‌ಗಳು
 • ನೀವು ಅಪ್‌ಲೋಡ್ ಮಾಡುವ ಫೋಟೋಗಳು ಮತ್ತು ವೀಡಿಯೊಗಳು
 • ಡ್ರೈವ್‌ನಲ್ಲಿ ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳು

“ನೀವು" ನಿಮ್ಮನ್ನು ರೂಪಿಸುವ ಸಂಗತಿಗಳು

ನೀವು Google ಖಾತೆಗೆ ಸೈನ್ ಅಪ್ ಮಾಡಿದಾಗ, ನಮಗೆ ನೀವು ನೀಡುವಂತಹ ಮೂಲ ಮಾಹಿತಿಯನ್ನು ಇರಿಸಿಕೊಳ್ಳುತ್ತೇವೆ. ಇದನ್ನು ಒಳಗೊಂಡಿರಬಹುದು:

 • ಹೆಸರು
 • ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್
 • ಜನ್ಮದಿನ
 • ಗಂಡು/ಹೆಣ್ಣು ಮಾಹಿತಿ
 • ಫೋನ್ ಸಂಖ್ಯೆ
 • ದೇಶ
ಸ್ಮಾರ್ಟ್‌ಫೋನ್‌ನಲ್ಲಿ Google ನಕ್ಷೆಗಳು

ತ್ವರಿತಗತಿಯಲ್ಲಿ ನಿಮ್ಮ ಸ್ಥಳಗಳನ್ನು ಹುಡುಕಲು Google ನಕ್ಷೆಗಳು ಸಹಾಯ ಮಾಡುವ ಬಗೆ

ನೀವು Google ನಕ್ಷೆಗಳು ಅಪ್ಲಿಕೇಶನ್ ಬಳಸುವಾಗ, ನಿಮ್ಮ ಸ್ಥಳದ ಕುರಿತ ಅನಾಮಧೇಯ ಡೇಟಾದ ಅಂಶಗಳನ್ನು Google ಗೆ ನಿಮ್ಮ ಫೋನ್ ಮರಳಿ ಕಳುಹಿಸುತ್ತದೆ. ಟ್ರಾಫಿಕ್‌ ನಮೂನೆಗಳನ್ನು ಗುರುತಿಸಲು ನಿಮ್ಮ ಸುತ್ತಲಿನ ಜನರ ಡೇಟಾದ ಜೊತೆಗೆ ಇದನ್ನು ಸಂಯೋಜಿಸಲಾಗುತ್ತದೆ. ಉದಾಹರಣೆಗಾಗಿ, ಒಂದೇ ಗಲ್ಲಿಯಲ್ಲಿ ಬಹಳಷ್ಟು ವಾಹನಗಳು ನಿಧಾನವಾಗಿ ಚಲಿಸುತ್ತಿರುವದನ್ನು ನಕ್ಷೆಗಳು ಪತ್ತೆ ಮಾಡಬಹುದು ಮತ್ತು ಅಲ್ಲಿ ಟ್ರಾಫಿಕ್ ಹೆಚ್ಚಾಗಿದೆಯೆಂದು ನಿಮಗೆ ತಿಳಿಸಬಹುದು. ಆದ್ದರಿಂದ ಮುಂದಿನ ಬಾರಿ ನಕ್ಷೆಗಳು ನಿಮಗೆ ಅಪಘಾತದ ಬಗ್ಗೆ ಎಚ್ಚರಿಸುತ್ತವೆ ಮತ್ತು ವೇಗವಾಗಿ ಹೋಗುವ ಮಾರ್ಗದ ಸಲಹೆ ನೀಡುತ್ತವೆ, ನಿಮ್ಮ ಸಹ ಚಾಲಕರು ಒದಗಿಸುವ ಡೇಟಾ ಶಾರ್ಟ್‌ಕಟ್ ಹುಡುಕಲು ನಿಮಗೆ ಸಹಾಯ ಮಾಡುತ್ತದೆ.

ಸ್ವಯಂಪೂರ್ಣ ಹೊಂದಿರುವ Google ಹುಡುಕಾಟದ ಬಾರ್

ನಿಮ್ಮ ಹುಡುಕಾಟಗಳನ್ನು Google ಸ್ವಯಂಪೂರ್ಣಗೊಳಿಸುವ ಬಗೆ

ನೀವು ಏನನ್ನಾದರೂ ಹುಡುಕುವಾಗ ಅದರಲ್ಲಿ ಕಾಗುಣಿತ ತಪ್ಪು ಮಾಡಿದರೂ — ನಿಮಗೇನು ಬೇಕು ಎಂಬುದನ್ನು Google ಹೇಗೆಯೊ ಅರ್ಥ ಮಾಡಿಕೊಂಡಿರುತ್ತದೆ. ನಮ್ಮ ಕಾಗುಣಿತ ಸರಿಪಡಿಸುವಿಕೆ ಮಾದರಿಯು ನಿಮಗಾಗಿ ಅದನ್ನು ಸರಿಪಡಿಸಲು ಈ ಹಿಂದೆ ಅದೇ ತಪ್ಪನ್ನು ಮಾಡಿದ ಜನರ ಡೇಟಾವನ್ನು ಬಳಸುತ್ತದೆ. ಅದು ಹೇಗೆಂದರೆ ನೀವು “Barsalona” ಎಂದು ಟೈಪ್ ಮಾಡಿದಾಗ, ನೀವು ಬಹುಶಃ “Barcelona” ಅರ್ಥೈಸುತ್ತಿರಬಹುದು ಎಂದು ನಾವು ತಿಳಿಯುತ್ತೇವೆ.

ನಿಮ್ಮ ಹುಡುಕಾಟಗಳನ್ನು ಸ್ವಯಂಪೂರ್ಣಗೊಳಿಸಲು ನಿಮ್ಮ ಹುಡುಕಾಟ ಇತಿಹಾಸ ಕೂಡಾ ಸಹಾಯವಾಗಬಹುದು. ಉದಾಹರಣೆಗಾಗಿ, ನೀವು ಈ ಹಿಂದೆ “ಬಾರ್ಸಿಲೋನಾ ವಿಮಾನಗಳು” ಎಂದು ಹುಡುಕಿದ್ದರೆ, ನೀವು ಅದನ್ನು ಟೈಪ್ ಮಾಡುವುದನ್ನು ಮುಗಿಸುವ ಮೊದಲೇ ನಾವು ಇದನ್ನು ಹುಡುಕಾಟ ಪೆಟ್ಟಿಗೆಯಲ್ಲಿ ಸೂಚಿಸಬಹುದು. ಅಥವಾ ನೀವೇನಾದರೂ ಫುಟ್‌ಬಾಲ್ ಕ್ಲಬ್‌ನ ಅಭಿಮಾನಿಯಾಗಿದ್ದರೆ ಮತ್ತು ಹೆಚ್ಚಾಗಿ “ಬಾರ್ಸಿಲೋನಾ ಸ್ಕೋರ್‌ಗಳು” ಅನ್ನು ಹುಡುಕುತ್ತಿದ್ದರೆ ನಾವು ತಕ್ಷಣವೇ ಅದನ್ನು ಸೂಚಿಸಬಹುದು.

ಸ್ವಯಂಭರ್ತಿ ಮೂಲಕ ಪೂರ್ಣಗೊಳಿಸಲಾದ ಫಾರ್ಮ್ ಜೊತೆಗೆ Chrome ಟ್ಯಾಬ್

ನಿಮಗಾಗಿ ಫಾರ್ಮ್‌ಗಳನ್ನು Chrome ಪೂರ್ಣಗೊಳಿಸುವ ಬಗೆ

ಪ್ರತಿ ಬಾರಿ ನೀವು ಖಾತೆಗಾಗಿ ಖರೀದಿ ಅಥವಾ ಸೈನ್ ಅಪ್ ಮಾಡಿದಾಗ, ನಿಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಫಾರ್ಮ್‌ಗಳನ್ನು ಭರ್ತಿ ಮಾಡಲು ನೀವು ಸಮಯವನ್ನು ವ್ಯಯಿಸುತ್ತೀರಿ. ನೀವು Chrome ಬಳಸಿದಾಗ, ನಾವು ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಪಾವತಿ ಮಾಹಿತಿಯಂತಹ ವಿಷಯಗಳನ್ನು ಉಳಿಸಬಹುದು ಆದ್ದರಿಂದ ನಾವು ನಿಮಗಾಗಿ ಈ ಫಾರ್ಮ್‌ಗಳನ್ನು ಸ್ವಯಂಪೂರ್ಣಗೊಳಿಸಬಹುದು. ನೀವು ಯಾವಾಗಲೂ ನಿರ್ದಿಷ್ಟ ಸ್ವಯಂ ಭರ್ತಿ ಕ್ಷೇತ್ರಗಳನ್ನು ಸಂಪಾದಿಸಬಹುದು ಅಥವಾ ಈ ಸೆಟ್ಟಿಂಗ್ ಅನ್ನು ಒಟ್ಟಾರೆಯಾಗಿ ನಿಷ್ಕ್ರಿಯಗೊಳಿಸಬಹುದು.

ಪ್ರೊಫೈಲ್ ಫೋಟೋ ಮತ್ತು ಖಾಸಗಿ ಫಲಿತಾಂಶಗಳ ಬಟನ್ ಹೊಂದಿರುವ Google ಹುಡುಕಾಟದ ಬಾರ್

ನಿಮ್ಮ ಸ್ವಂತ ಮಾಹಿತಿ ಹುಡುಕಲು Google ಹುಡುಕಾಟ ಸಹಾಯ ಮಾಡುವ ಬಗೆ

Google ಹುಡುಕಾಟವು Gmail, Google ಫೋಟೋಗಳು, ಕ್ಯಾಲೆಂಡರ್, ಮತ್ತು ಹೆಚ್ಚಿನವುಗಳಿಂದ ಉಪಯುಕ್ತ ಮಾಹಿತಿಯನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮ ಖಾಸಗಿ ಹಡುಕಾಟದ ಫಲಿತಾಂಶಗಳಲ್ಲಿ ತೋರಿಸಬಹುದು, ಈ ಮೂಲಕ ನಿಮ್ಮಷ್ಟಕ್ಕೆ ನೀವೇ ಹುಡುಕಾಟ ಮಾಡುವ ಅಗತ್ಯವಿಲ್ಲ. “ನನ್ನ ದಂತವೈದ್ಯರ ಪೂರ್ವನಿಗದಿತ ಭೇಟಿ”, “ಸಮುದ್ರತೀರದಲ್ಲಿನ ನನ್ನ ಫೋಟೋಗಳನ್ನು ನನಗೆ ತೋರಿಸು” ಅಥವಾ “ನನ್ನ ಹೋಟೆಲ್ ಕಾಯ್ದಿರಿಸುವಿಕೆ ಎಲ್ಲಿ” ಇಂತಹ ವಿಷಯಗಳಿಗಾಗಿ ಹುಡುಕಿ ನೋಡಿ. ಎಲ್ಲಿಯವರೆಗೆ ನೀವು ಸೈನ್ ಇನ್ ಆಗಿರುವಿರೋ, ನಾವು ಈ ಮಾಹಿತಿಯನ್ನು ಇತರ Google ಸೇವೆಗಳಿಂದ ಪಡೆದುಕೊಳ್ಳುತ್ತೇವೆ ಮತ್ತು ಕೇವಲ ಒಂದೇ ಹಂತದಲ್ಲಿ ಅದನ್ನು ನಿಮಗೆ ನೀಡುತ್ತೇವೆ.

ಬಳಕೆದಾರರು ಮತ್ತು Google ಸಹಾಯಕರ ನಡುವಿನ ಚಾಟ್ ಬಬಲ್‌ಗಳು

ಕಾರ್ಯಗಳನ್ನು ಪೂರ್ಣಗೊಳಿಸಲು Google ಸಹಾಯಕವು ನಿಮಗೆ ಹೇಗೆ ಸಹಾಯ ಮಾಡಬಹುದು

ನೀವು ಮನೆಯಲ್ಲಿ ಇರಿ ಅಥವಾ ನಿಮ್ಮ ಕಾರ್ಯದಲ್ಲಿ ವ್ಯಸ್ತವಾಗಿರಿ, ಸಹಾಯಕವು ಯಾವಾಗಲೂ ನಿಮ್ಮ ಸಹಾಯಕ್ಕೆ ಲಭ್ಯವಿರುತ್ತದೆ. ನಿಮ್ಮ ಸಹಾಯಕಕ್ಕೆ ನೀವು ಪ್ರಶ್ನೆಯನ್ನು ಕೇಳಿದಾಗ ಅಥವಾ ಏನು ಮಾಡಬೇಕೆಂದು ಹೇಳಿದಾಗ, ನಿಮಗೆ ಬೇಕಾಗಿರುವುದನ್ನು ಪಡೆಯಲು ಅದು ಬೇರೆ Google ಸೇವೆಗಳಿಂದ ಡೇಟಾವನ್ನು ಬಳಸುತ್ತದೆ. ಉದಾಹರಣೆಗೆ, “ಹತ್ತಿರದಲ್ಲಿ ಯಾವ ಕಾಫಿ ಶಾಪ್‌ ಇದೆ?” ಅಥವಾ “ನಾಳೆ ನನಗೆ ಕೊಡೆಯ ಅಗತ್ಯೆವಿದೆಯೇ?” ಎಂದು ನೀವು ಕೇಳಿದರೆ ನಿಮಗೆ ಅತ್ಯಂತ ಸೂಕ್ತವಾದ ಉತ್ತರ ನೀಡಲು ನಿಮ್ಮ ಸಹಾಯಕವು ನಕ್ಷೆಗಳು ಮತ್ತು ಹುಡುಕಾಟ ಹಾಗೆಯೇ ನಿಮ್ಮ ಸ್ಥಳ, ಆಸಕ್ತಿ ಮತ್ತು ಆದ್ಯತೆಗಳ ಮಾಹಿತಿಯನ್ನು ಬಳಸುತ್ತದೆ. ನಿಮ್ಮ ಸಹಾಯದ ಮೂಲಕ ಸಂವಹನಗಳಿಂದ ಸಂಗ್ರಹಿಸಲಾದ ಡೇಟಾವನ್ನು ವೀಕ್ಷಿಸಲು ಅಥವಾ ಅಳಿಸಲು ನೀವು ಯಾವಾಗಲೂ ನನ್ನ ಚಟುವಟಿಕೆ ಪರಿಕರವನ್ನು ಭೇಟಿ ಮಾಡಬಹುದು.

ನಿಮ್ಮ Google ಅನುಭವವನ್ನು ನಿಯಂತ್ರಿಸಿ

ನಿಮ್ಮ ಗೌಪ್ಯತೆಯನ್ನು ನಿಯಂತ್ರಿಸಲು ನೀವು ಯಾವ ಸಮಯದಲ್ಲಾದರೂ ಬಳಸಬಹುದಾದ ಕೆಲವು ಉಪಕರಣಗಳು ಇಲ್ಲಿವೆ.

ಪ್ರದರ್ಶಿಸಲಾದ ನನ್ನ ಖಾತೆಯ ಜೊತೆಗೆ ಬ್ರೌಸರ್ ಮಾಡಿ

ನನ್ನ ಖಾತೆಯಲ್ಲಿ ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ

ನೀವು Google ಖಾತೆಯನ್ನು ಹೊಂದಿರಲಿ ಅಥವಾ ಇಲ್ಲದಿರಲಿ, ಯಾವ ಪ್ರಕಾರದ ಡೇಟಾ ನಿಮಗೆ Google ಸೇವೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು ಎಂಬುದನ್ನು ನಿರ್ಧರಿಸಿ. ನನ್ನ ಖಾತೆ ನಿಮಗೆ ತ್ವರಿತ ಪ್ರವೇಶವನ್ನು ಉಪಕರಣಗಳಿಗೆ ನೀಡುತ್ತದೆ ಅದು ನಿಮಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿರ್ವಹಿಸಲು ಮತ್ತು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

Chrome ವಿಂಡೋದಲ್ಲಿನ ಕಳೆದ ಹುಡುಕಾಟಗಳು

ನನ್ನ ಚಟುವಟಿಕೆಯಲ್ಲಿ ಯಾವ ಡೇಟಾ ನಿಮ್ಮ ಖಾತೆಯಲ್ಲಿರುವುದು ಎಂದು ನೋಡಿ

ನನ್ನ ಚಟುವಟಿಕೆ ಎಂಬುದು, ನೀವು ನಮ್ಮ ಸೇವೆಗಳನ್ನು ಬಳಸಿಕೊಂಡು ಹುಡುಕಿದ, ನೋಡಿದ ಮತ್ತು ವೀಕ್ಷಿಸಿದ ಎಲ್ಲವನ್ನೂ ಕಾಣಬಹುದಾದ ಕೇಂದ್ರ ಸ್ಥಳವಾಗಿದೆ. ನಿಮ್ಮ ಕಳೆದ ಆನ್‌ಲೈನ್ ಚಟುವಟಿಕೆಯನ್ನು ಸುಲಭವಾಗಿ ಮರುಪಡೆಯುವಂತೆ ಮಾಡಲು, ನಾವು ನಿಮಗೆ ವಿಷಯ, ದಿನಾಂಕ, ಮತ್ತು ಉತ್ಪನ್ನ ಮೂಲಕ ಹುಡುಕಲು ಉಪಕರಣಗಳನ್ನು ನೀಡುತ್ತೇವೆ. ನಿಮ್ಮ ಖಾತೆಯೊಂದಿಗೆ ಸಂಯೋಜಿಸಲು ನೀವು ಬಯಸದ ಸಂಪೂರ್ಣ ವಿಷಯಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳನ್ನು ನೀವು ಶಾಶ್ವತವಾಗಿ ಅಳಿಸಬಹುದು.

Chrome ಅಜ್ಞಾತ ಐಕಾನ್

ಅಜ್ಞಾತ ಮೋಡ್ ಜೊತೆಗೆ ವೆಬ್ ಅನ್ನು ಖಾಸಗಿಯಲ್ಲಿ ಬ್ರೌಸ್ ಮಾಡಿ

ನಿಮ್ಮ ಹುಡುಕಾಟದ ಫಲಿತಾಂಶಗಳನ್ನು ಇನ್ನಷ್ಟು ಉಪಯುಕ್ತವನ್ನಾಗಿಸಲು ನಿಮ್ಮ ವೆಬ್ ಇತಿಹಾಸ ಸಹಾಯವಾಗುತ್ತದೆ, ಆದರೆ ಕೆಲವು ಸಮಯಗಳಲ್ಲಿ ನೀವು ಖಾಸಗಿಯಾಗಿ ಬ್ರೌಸ್ ಮಾಡಲು ಬಯಸಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಕಂಪ್ಯೂಟರ್ ಹಂಚಿಕೊಂಡರೆ, ಉದಾಹರಣೆಗೆ, ನಿಮ್ಮ ಬ್ರೌಸಿಂಗ್ ಇತಿಹಾಸವು ನೀವು ಹುಡುಕುತ್ತಿರುವ ಆಶ್ಚರ್ಯಕರ ಹುಟ್ಟುಹಬ್ಬದ ಉಡುಗೊರೆಯನ್ನು ನಾಶಮಾಡುವುದನ್ನು ನೀವು ಬಹುಶಃ ಬಯಸುವುದಿಲ್ಲ. ಇಂತಹ ಕ್ಷಣಗಳಿಗಾಗಿ, ನಿಮ್ಮ ಬ್ರೌಸಿಂಗ್ ಇತಿಹಾಸ Google Chrome ನಲ್ಲಿ ಉಳಿಯಬಾರದು ಎಂದಾದರೆ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ ಅಜ್ಞಾತ ವಿಂಡೋ ತೆರೆಯಿರಿ.