ನಿಯಂತ್ರಣ ತೆಗೆದುಕೊಳ್ಳಿ

ನಿಮ್ಮ ಗೌಪ್ಯತೆಯನ್ನು ನಿರ್ವಹಿಸುವ ನಿಯಂತ್ರಣ ನಿಮ್ಮ ಕೈಯಲ್ಲಿರುತ್ತದೆ.

ನಾವು ನಮ್ಮ ಸೇವೆಗಳನ್ನು ಸಾಧ್ಯವಾದಷ್ಟು ಪ್ರಯೋಜನಕಾರಿಯನ್ನಾಗಿಸಲು ಡೇಟಾವನ್ನು ಬಳಸುತ್ತೇವೆ. ಆದರೆ ಯಾವ ಪ್ರಕಾರದ ಡೇಟಾವನ್ನು ನಾವು ಸಂಗ್ರಹಿಸಬೇಕು ಮತ್ತು ಬಳಸಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು. ನಿಮ್ಮ ಗೌಪ್ಯತೆ ಮತ್ತು ಭದ್ರತೆಯನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುವ ಹಾಗೂ ಬಳಸಲು ಸುಲಭವಾದ ಪರಿಕರಗಳಿಗೆ ತ್ವರಿತ ಪ್ರವೇಶ ಒದಗಿಸುವ "ನನ್ನ ಖಾತೆ"ಯನ್ನು ನಾವು ನಿರ್ಮಿಸಿದ್ದೇವೆ. ಕೆಳಗಿನ ಸೆಟ್ಟಿಂಗ್‌ಗಳನ್ನು ಪರಿಶೀಲಿಸುವ ಮೂಲಕ Google ಸೇವೆಗಳು ನಿಮಗಾಗಿ ಯಾವ ರೀತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು ಎಂಬುದನ್ನು ನೀವು ನಿರ್ಧರಿಸಿ.

ನನ್ನ ಖಾತೆಗೆ ಹೋಗಿ

ಗೌಪ್ಯತೆ ಪರಿಶೀಲನೆಯ ಜೊತೆಗೆ ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ

ಕೆಲವೇ ನಿಮಿಷಗಳಲ್ಲಿ, Google ಸಂಗ್ರಹಿಸುವ ಡೇಟಾ ಪ್ರಕಾರಗಳನ್ನು ನೀವು ನಿರ್ವಹಿಸಬಹುದು, ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತಹ ಅಥವಾ ಸಾರ್ವಜನಿಕ ಮಾಡುವ ಮಾಹಿತಿಯನ್ನು ಅಪ್‌ಡೇಟ್‌ ಮಾಡಬಹುದು ಮತ್ತು Google ನಿಮಗೆ ತೋರಿಸಲು ಬಯಸುವ ಜಾಹೀರಾತುಗಳ ಪ್ರಕಾರಗಳನ್ನು ಸರಿಹೊಂದಿಸಬಹುದು. ಈ ಸೆಟ್ಟಿಂಗ್‌ಗಳನ್ನು ನಿಮಗೆ ಎಷ್ಟು ಬಾರಿ ಬೇಕಾದರೂ ಬದಲಾಯಿಸಬಹುದು.

ಗೌಪ್ಯತೆ ಪರಿಶೀಲನೆಯನ್ನು ತೆಗೆದುಕೊಳ್ಳಿ

ಭದ್ರತೆ ಪರಿಶೀಲನೆಯೊಂದಿಗೆ ನಿಮ್ಮ ಖಾತೆಯನ್ನು ಭದ್ರಪಡಿಸಿ

ನಿಮ್ಮ Google ಖಾತೆಯನ್ನು ರಕ್ಷಿಸಲು ನೀವು ಮೊದಲು ಭದ್ರತೆಯ ಪರಿಶೀಲನೆ ನಡೆಸಬೇಕು. ನಿಮ್ಮ ಮರುಪ್ರಾಪ್ತಿ ಮಾಹಿತಿಯು ನವೀಕೃತವಾಗಿದೆ ಮತ್ತು ನಿಮ್ಮ ಖಾತೆಗೆ ಸಂಪರ್ಕಗೊಂಡಿರುವ ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು ಮತ್ತು ಸಾಧನಗಳು ಇನ್ನೂ ಬಳಸುವಂತಹವು ಹಾಗೂ ವಿಶ್ವಾಸಾರ್ಹವಾದವುಗಳು ಎಂಬುದನ್ನು ಪರಿಶೀಲಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ಇದನ್ನು ನಾವು ನಿರ್ಮಿಸಿದ್ದೇವೆ. ಏನಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ, ನಿಮ್ಮ ಸೆಟ್ಟಿಂಗ್‌ಗಳು ಅಥವಾ ಪಾಸ್‌ವರ್ಡ್ ಅನ್ನು ನೀವು ತಕ್ಷಣವೇ ಬದಲಾಯಿಸಬಹುದು. ಭದ್ರತೆ ಪರಿಶೀಲನೆಯು ಕೇವಲ ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಸಾಮಾನ್ಯವಾಗಿ ನಿಮಗೆ ಇಷ್ಟವಾದಾಗಲೆಲ್ಲ ನೀವು ತೆಗೆದುಕೊಳ್ಳಬಹುದು.

ಭದ್ರತಾ ಪರಿಶೀಲನೆಯನ್ನು ತೆಗೆದುಕೊಳ್ಳಿ

ನಿಮ್ಮ ಖಾತೆಯೊಂದಿಗೆ ಯಾವ ತರಹದ ಡೇಟಾ ಸಂಯೋಜಿತವಾಗಬೇಕು ಎಂಬುದನ್ನು ನಿರ್ಧರಿಸಿ

ನಕ್ಷೆಗಳಲ್ಲಿನ ಉತ್ತಮ ಪ್ರಯಾಣದ ಆಯ್ಕೆಗಳಿಂದ ಹಿಡಿದು ಹುಡುಕಾಟದಲ್ಲಿನ ತ್ವರಿತ ಫಲಿತಾಂಶಗಳವರೆಗೆ, ನಿಮ್ಮ ಖಾತೆಯೊಂದಿಗೆ ನಾವು ಉಳಿಸುವ ಡೇಟಾ Google ಸೇವೆಗಳನ್ನು ನಿಮಗೆ ಇನ್ನಷ್ಟು ಉಪಯುಕ್ತವನ್ನಾಗಿಸಬಹುದು. ಚಟುವಟಿಕೆ ನಿಯಂತ್ರಣಗಳನ್ನು ಬಳಸಿಕೊಂಡು, ನಿಮ್ಮ ಖಾತೆಯೊಂದಿಗೆ ಯಾವುದು ಸಂಯೋಜಿತವಾಗುತ್ತದೆ ಎಂಬುದನ್ನು ನಿರ್ಧರಿಸಬಹುದು ಮತ್ತು ನಿಮ್ಮ ಹುಡುಕಾಟಗಳು ಹಾಗೂ ಬ್ರೌಸಿಂಗ್ ಚಟುವಟಿಕೆ, ನಿಮ್ಮ ಸಾಧನಗಳಿಂದ ನೀವು ಹೋಗುವ ಸ್ಥಳಗಳು ಮತ್ತು ಮಾಹಿತಿಗಳಂತಹ ನಿರ್ದಿಷ್ಟ ಡೇಟಾ ಪ್ರಕಾರಗಳ ಸಂಗ್ರಹಣೆಯನ್ನು ವಿರಾಮಗೊಳಿಸಬಹುದು.

ಚಟುವಟಿಕೆ ನಿಯಂತ್ರಣಗಳಿಗೆ ಹೋಗಿ

ನಿಮ್ಮ ಆದ್ಯತೆಗಳನ್ನು ಆಧರಿಸಿದ ಜಾಹೀರಾತುಗಳನ್ನು ನಿಯಂತ್ರಿಸಿ

ನಿಮ್ಮ ಜಾಹೀರಾತುಗಳ ಸೆಟ್ಟಿಂಗ್‌ಗಳಲ್ಲಿ, ನಿಮಗೆ ಆಸಕ್ತಿ ಇರುವ ವಿಷಯಗಳನ್ನು ಆಧರಿಸಿದ ಜಾಹಿರಾತುಗಳನ್ನು ನೀವು ನಿಯಂತ್ರಿಸಬಹುದು. ಉದಾಹರಣೆಗೆ, ನೀವು ಪಾಪ್ ಸಂಗೀತ ಇಷ್ಟಪಡುವುದನ್ನು Google ಗೆ ತಿಳಿಸಲು ಜಾಹೀರಾತುಗಳ ವೈಯಕ್ತೀಕರಣ ಸೆಟ್ಟಿಂಗ್‌ಗಳನ್ನು ನೀವು ಬಳಸಿದರೆ, ನೀವು YouTube ಗೆ ಸೈನ್ ಇನ್ ಮಾಡಿದಾಗ ಮುಂಬರಲಿರುವ ಬಿಡುಗಡೆಗಳು ಮತ್ತು ನಿಮ್ಮ ಸ್ಥಳಕ್ಕೆ ಹತ್ತಿರವಿರುವ ಪ್ರದರ್ಶನಗಳ ಕುರಿತಾದ ಜಾಹೀರಾತುಗಳನ್ನು ನೀವು ನೋಡಬಹುದು.

ನೀವು ಸೈನ್ ಇನ್ ಮಾಡುವಾಗ ಜಾಹೀರಾತುಗಳ ವೈಯಕ್ತೀಕರಣವನ್ನು ನೀವು ಆಫ್ ಮಾಡಿದರೆ, Google ಸೇವೆಗಳು ಜೊತೆಗೆ ನಮ್ಮೊಂದಿಗೆ ಪಾಲುದಾರರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಾದ್ಯಂತ ನಿಮ್ಮ ಆಸಕ್ತಿಗಳಿಗೆ ಆಧರಿಸಿದ ಜಾಹೀರಾತುಗಳನ್ನು ತೋರಿಸುವುದನ್ನು ನಾವು ನಿಲ್ಲಿಸುತ್ತೇವೆ. ನೀವು ಸೈನ್ ಔಟ್ ಮಾಡಿದರೆ, ಜಾಹೀರಾತುಗಳ ವೈಯಕ್ತೀಕರಣ ಆಫ್ ಮಾಡಿದರೆ ಜಾಹೀರಾತುಗಳನ್ನು ತೋರಿಸುವಲ್ಲಿ Google ಸೇವೆಗಳಿಗೆ ಮಾತ್ರ ಪರಿಣಾಮವಾಗುತ್ತದೆ.

ಜಾಹೀರಾತುಗಳ ಸೆಟ್ಟಿಂಗ್‌ಗಳಿಗೆ ಹೋಗಿ

ನನ್ನ ಚಟುವಟಿಕೆಯಲ್ಲಿ ಯಾವ ಡೇಟಾ ನಿಮ್ಮ ಖಾತೆಯಲ್ಲಿರುವುದು ಎಂದು ನೋಡಿ

"ನನ್ನ ಚಟುವಟಿಕೆ"ಯು, ನೀವು ನಮ್ಮ ಸೇವೆಗಳನ್ನು ಬಳಸಿಕೊಂಡು ಹುಡುಕಿದ, ನೋಡಿದ ಮತ್ತು ವೀಕ್ಷಿಸಿದ ಸಂಗತಿಗಳನ್ನು ಒಳಗೊಂಡ ಕೇಂದ್ರ ಸ್ಥಳವಾಗಿದೆ. ನಿಮ್ಮ ಕಳೆದ ಆನ್‌ಲೈನ್ ಚಟುವಟಿಕೆಯನ್ನು ಸುಲಭವಾಗಿ ಮರುಪಡೆಯುವಂತೆ ಮಾಡಲು, ನಾವು ನಿಮಗೆ ವಿಷಯ, ದಿನಾಂಕ, ಮತ್ತು ಉತ್ಪನ್ನ ಮೂಲಕ ಹುಡುಕಲು ಉಪಕರಣಗಳನ್ನು ನೀಡುತ್ತೇವೆ. ನಿಮ್ಮ ಖಾತೆಯೊಂದಿಗೆ ಸಂಯೋಜಿಸಲು ನೀವು ಬಯಸದ ಸಂಪೂರ್ಣ ವಿಷಯಗಳು ಅಥವಾ ನಿರ್ದಿಷ್ಟ ಚಟುವಟಿಕೆಗಳನ್ನು ನೀವು ಶಾಶ್ವತವಾಗಿ ಅಳಿಸಬಹುದು.

ನನ್ನ ಚಟುವಟಿಕೆಗೆ ಹೋಗಿ

ನಿಮ್ಮ ಮೂಲ ಖಾತೆಯ ಮಾಹಿತಿಯನ್ನು ಪರಿಶೀಲಿಸಿ

Google ಸೇವೆಗಳಲ್ಲಿ ನೀವು ಹಂಚಿಕೊಳ್ಳುವ ವೈಯಕ್ತಿಕ ಮಾಹಿತಿಯ ಮೇಲೆ ನಿಯಂತ್ರಣವಿರಲಿ — ಉದಾಹರಣೆಗೆ ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪರಿಶೀಲಿಸಿ

ನಿಮ್ಮ ಡೇಟಾ ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ನಿಮ್ಮ ವಿಷಯವನ್ನು ಎಲ್ಲಿಗಾದರೂ ಕೊಂಡೊಯ್ಯಿರಿ

ನಿಮ್ಮ ಫೋಟೋಗಳು. ನಿಮ್ಮ ಇಮೇಲ್‌ಗಳು. ನಿಮ್ಮ ಸಂಪರ್ಕಗಳು. ಇನ್ನು ನಿಮ್ಮ ಬುಕ್‌ಮಾರ್ಕ್‌ಗಳು. Google ಖಾತೆಯಲ್ಲಿ ಸಂಗ್ರಹಣೆಗೊಂಡ ವಿಷಯದ ಮೇಲೆ ನಿಮಗೆ ನಿಯಂತ್ರಣವಿರುತ್ತದೆ ಆದ್ದರಿಂದಾಗಿ ’ನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿ’ ಅನ್ನು ನಾವು ರಚಿಸಿದ್ದೇವೆ - ಹಾಗಾಗಿ ನೀವು ನಕಲಿಸಬಹುದು, ಬ್ಯಾಕಪ್ ಮಾಡಬಹುದು ಅಥವಾ ಮತ್ತೊಂದು ಸೇವೆಗೆ ಹೋಗಬಹುದು.

'ನಿಮ್ಮ ಡೇಟಾವನ್ನು ಡೌನ್‌ಲೋಡ್‌‌ ಮಾಡಿ' ಗೆ ಹೋಗಿ