ಸುರಕ್ಷಿತ ಇಂಟರ್‌ನೆಟ್

ಇಂಟರ್‌ನೆಟ್ ಅನ್ನು ಸುರಕ್ಷಿತವನ್ನಾಗಿ ಮಾಡಲು ನಾವು ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತೇವೆ.

ನಾವು ಭದ್ರತಾ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸುದೀರ್ಘ ಇತಿಹಾಸವನ್ನೇ ಹೊಂದಿದ್ದು, ಅದರ ಪ್ರಯೋಜನ ಕೇವಲ ನಮ್ಮ ಬಳಕೆದಾರರಿಗೆ ಮಾತ್ರವಲ್ಲ, ಸಮಗ್ರ ಆನ್‌ಲೈನ್ ಜಗತ್ತಿಗೆ ಸಲ್ಲುತ್ತದೆ ಎಂದರೆ ಉತ್ಪ್ರೇಕ್ಷೆಯ ಮಾತಲ್ಲ. ನಾವು ನಮ್ಮ ಸೇವೆಗಳನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ತಂತ್ರಜ್ಞಾನವೊಂದನ್ನು ಹುಟ್ಟು ಹಾಕಿದಾಗ, ಅದು ಎಲ್ಲರಿಗೂ ಸಲ್ಲುವಂತೆ ಮಾಡುವ ಕಾರಣಕ್ಕೆ ಅದರ ಹಂಚಿಕೆಯ ಅವಕಾಶಗಳನ್ನು ಕಂಡುಕೊಂಡೆವು. ಹಾಗೆಯೇ, ಬೆದರಿಕೆಯ ಸ್ವರೂಪಗಳು ಕಾಲ ಕಾಲಕ್ಕೆ ಬದಲಾಗಬಹುದಾದ್ದರಿಂದ, ನಮ್ಮ ಹೊಂದಾಣಿಕೆಯ, ಮುಂದಾಲೋಚನೆಯುಳ್ಳ ಕ್ರಮಗಳು ತಮ್ಮನ್ನು ಇತರ ಕಂಪನಿಗಳು ಅನುಸರಿಸಲು ಅನುವು ಮಾಡಿಕೊಟ್ಟಿವೆ.

ಸುರಕ್ಷಿತ ಬ್ರೌಸ್ ಮಾಡುವಿಕೆಯು ಕೇವಲ Chrome ಬಳಕೆದಾರರಲ್ಲದೇ ಎಲ್ಲರನ್ನೂ ರಕ್ಷಿಸುತ್ತದೆ

Chrome ಬಳಕೆದಾರರು ಅಪಾಯಕಾರಿ ವೆಬ್‌ಸೈಟ್‌ಗೆ ಭೇಟಿ ನೀಡಲು ಪ್ರಯತ್ನಿಸಿದಾಗ ಮಾಲ್‌ವೇರ್ ಮತ್ತು ಫಿಶಿಂಗ್ ಪ್ರಯತ್ನಗಳಿಂದ ಅವರನ್ನು ಎಚ್ಚರಿಸಲು ನಾವು ಮೂಲತಃ ನಮ್ಮ ಸುರಕ್ಷಿತ ಬ್ರೌಸ್ ಮಾಡುವಿಕೆ ತಂತ್ರಜ್ಞಾನವನ್ನು ನಿರ್ಮಿಸಿದ್ದೇವೆ. ಪ್ರತಿಯೊಬ್ಬರ ಪಾಲಿಗೂ ಇಂಟರ್‌ನೆಟ್ ಅನ್ನು ಸುರಕ್ಷಿತವಾಗಿಸಲು ಈ ತಂತ್ರಜ್ಞಾನವನ್ನು ಉಚಿತಗೊಳಿಸಿದ್ದೇವೆ ಮತ್ತು Apple Safari ಮತ್ತು Mozilla Firefox ಸೇರಿದಂತೆ ಇತರ ಕಂಪನಿಗಳು ಇದನ್ನು ತಮ್ಮ ಬ್ರೌಸ್‌ರ್‌ಗಳಲ್ಲಿ ಉಚಿತವಾಗಿ ಬಳಸಬಹುದು. ಇಂದು, ಪ್ರಪಂಚದ ಅರ್ಧದಷ್ಟು ಆನ್‌ಲೈನ್ ಪ್ರಜೆಗಳು ಸುರಕ್ಷಿತ ಬ್ರೌಸ್ ಮಾಡುವಿಕೆಯ ಮೂಲಕ ಸುರಕ್ಷಿತರಾಗಿದ್ದಾರೆ.

ನಾವು ವೆಬ್‌ಸೈಟ್ ಮಾಲೀಕರಿಗೆ ಅವರ ಸೈಟ್‌ಗಳು ಭದ್ರತಾ ನ್ಯೂನತೆಗಳನ್ನು ಹೊಂದಿರುವಾಗ ಕೂಡಾ ಎಚ್ಚರಿಕೆ ನೀಡುತ್ತೇವೆ ಮತ್ತು ಅವರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸಹಾಯಕ್ಕಾಗಿ ಉಚಿತ ಪರಿಕರಗಳನ್ನು ನೀಡುತ್ತೇವೆ. ನಾವು ಹೊಸ ಭದ್ರತಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದಂತೆ ಅದನ್ನು ಹಂಚುವುದನ್ನು ಮುಂದುವರೆಸುವ ಮೂಲಕ, ಪ್ರತಿಯೊಬ್ಬರಿಗೂ ಸುರಕ್ಷಿತವಾದ ಇಂಟರ್‌ನೆಟ್ ನಿರ್ಮಿಸಲು ನಾವು ಸಹಾಯ ಮಾಡುತ್ತೇವೆ.

ನೀವು ಇಂಟರ್‌ನೆಟ್ ಬ್ರೌಸ್ ಮಾಡುವಾಗ ನಿಮ್ಮನ್ನು ಸುರಕ್ಷಿತವಾಗಿರಿಸಲು ನಾವು HTTPS ಬಳಸುತ್ತೇವೆ

ನಮ್ಮ ಸೇವೆಗಳಿಗೆ HTTPS ಎನ್‌ಕ್ರಿಪ್ಶನ್‌ ಮೂಲಕ ಸಂಪರ್ಕಿಸುವುದರಿಂದ ಗೂಢಾಚಾರಿಕೆಯ ಕಣ್ಣುಗಳು ಮತ್ತು ದುರುದ್ದೇಶಪೂರಿತ ಹ್ಯಾಕರ್‌ಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ನೀವು ಏನು ಮತ್ತು ಎಲ್ಲಿ ಬಯಸಿದ್ದನ್ನು ಮಾತ್ರ ಪಡೆಯುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಈ ಸೇರಿಸಲಾದ ಭದ್ರತೆಯ ಅಳವಡಿಕೆಗೆ ವೆಬ್‌ಸೈಟ್‌ಗಳನ್ನು ಪ್ರೇರೇಪಿಸಲು, ನಮ್ಮ ಹುಡುಕಾಟ ಫಲಿತಾಂಶಗಳಲ್ಲಿ ವೆಬ್‌ಸೈಟ್‌ಗಳನ್ನು ಶ್ರೇಯಾಂಕ ಮಾಡಿದಾಗ Google ಹುಡುಕಾಟ ಅಲ್ಗೊರಿದಮ್ ಬಳಸುವ HTTPS ಎನ್‌ಕ್ರಿಪ್ಶನ್‌ ಅನ್ನು ಸಿಗ್ನಲ್‌ಗಳಲ್ಲಿ ಒಂದನ್ನಾಗಿ ನಾವು ಮಾಡಿದ್ದೇವೆ.

ದೋಷಗಳನ್ನು ಬಹಿರಂಗಪಡಿಸಿದ್ದಕ್ಕೆ ನಾವು ಭದ್ರತಾ ಪುರಸ್ಕಾರಗಳನ್ನು ರಚಿಸುತ್ತೇವೆ

ನಮ್ಮ ಸೇವೆಗಳಲ್ಲಿ ದೋಷಗಳನ್ನು ಕಂಡುಹಿಡಿಯಲು ಮತ್ತು ಭದ್ರತಾ ಪರಿಹಾರಗಳನ್ನು ರಚಿಸಲು ಸ್ವತಂತ್ರ ಸಂಶೋಧಕರಿಗೆ ಪಾವತಿಸುವುದಕ್ಕಾಗಿ Google ನಲ್ಲಿ ನಾವು ಭದ್ರತಾ ಪುರಸ್ಕಾರಗಳ ಪ್ರೋಗ್ರಾಂಗಳು ರಚಿಸುತ್ತೇವೆ. ಪ್ರತಿ ವರ್ಷ ನಾವು ಸಂಶೋಧನಾ ಅನುದಾನಗಳು ಮತ್ತು ದೋಷ ಪರಿಹಾರಗಳಿಗೆ ಲಕ್ಷಾಂತರ ಡಾಲರ್‌ಗಳನ್ನು ನೀಡುತ್ತೇವೆ. Chrome ಮತ್ತು Androidನಂತಹ ಹಲವಾರು Google ಉತ್ಪನ್ನಗಳಿಗೆ ನಾವು ಪ್ರಸ್ತುತ ಭದ್ರತಾ ಪುರಸ್ಕಾರ ಪ್ರೋಗ್ರಾಂಗಳನ್ನು ಬಳಸುತ್ತೇವೆ.

ಡೆವಲಪರ್‌ಗಳಿಗೆ ನಮ್ಮ ಭದ್ರತಾ ಪರಿಕರಗಳು ಲಭ್ಯವಾಗುವಂತೆ ನಾವು ಮಾಡುತ್ತೇವೆ

ಇತರರಿಗೆ ಇದು ಮೌಲ್ಯವನ್ನು ಒದಗಿಸಬಹುದು ಎಂದು ನಾವು ನಂಬಿದಾಗ ನಮ್ಮ ಭದ್ರತಾ ತಂತ್ರಜ್ಞಾನವನ್ನು ನಾವು ಹಂಚುತ್ತೇವೆ. ಉದಾಹರಣೆಗೆ, ನಾವು ನಮ್ಮ Google Cloud ಭದ್ರತಾ ಸ್ಕ್ಯಾನರ್ ಅನ್ನು ಡೆವಲಪರ್‌ಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತೇವೆ ಆದ್ದರಿಂದ ಅವರು ಭದ್ರತಾ ದೋಷಗಳಿಗೆ App Engine ನಲ್ಲಿ ತಮ್ಮ ವೆಬ್ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ವಿಶ್ಲೇಷಿಸಬಹುದು.

ಸುರಕ್ಷಿತ ಇಂಟರ್‌ನೆಟ್‌ಗೆ ಪ್ರೋತ್ಸಾಹಿಸಲು ನಾವು ನಮ್ಮ ಪದ್ಧತಿಗಳ ಕುರಿತ ಡೇಟಾವನ್ನು ಹಂಚಿಕೊಳ್ಳುತ್ತೇವೆ

2010ರಿಂದ ಪಾರದರ್ಶಕತೆ ವರದಿಯನ್ನು Google ಪ್ರಕಟಿಸಿದ್ದು, ಇದು ಕೃತಿಸ್ವಾಮ್ಯ ತೆಗೆದುಹಾಕುವಿಕೆ, ಬಳಕೆದಾರರ ಮಾಹಿತಿಗಳಿಗೆ ಸರ್ಕಾರದ ಕೋರಿಕೆ ಮತ್ತು ಸುರಕ್ಷಿತ ಬ್ರೌಸ್ ಮಾಡುವಿಕೆಯಂತಹ ಭದ್ರತಾ ಉಪಕ್ರಮಗಳ ವಿಷಯಗಳ ಅಂಕಿಅಂಶಗಳನ್ನು ಒಳಗೊಂಡಿದೆ. ಅಲ್ಲದೆ, ವೆಬ್‌ಸೈಟ್‌ಗಳು ಮತ್ತು ಇಮೇಲ್‌ಗೆ ಎನ್‌ಕ್ರಿಪ್ಶನ್‌ನ ಉದ್ಯಮ ಅಳವಡಿಕೆ ಕುರಿತ ಡೇಟಾವನ್ನು ಸಹ ನಾವು ಹಂಚಿಕೊಳ್ಳುತ್ತೇವೆ. ನಾವು ಇದನ್ನು ಕೇವಲ ನಮ್ಮ ಪ್ರಗತಿಯನ್ನು ನಮ್ಮ ಬಳಕೆದಾರರೊಂದಿಗೆ ಹಂಚಿಕೊಳ್ಳುವುದಕ್ಕೆ ಅಲ್ಲದೇ, ಎಲ್ಲರಿಗೂ ಸುರಕ್ಷಿತವಾದ ಇಂಟರ್ನೆಟ್ ದೊರಕುವ ಹಿತಾಸಕ್ತಿಯಲ್ಲಿ ಪ್ರಬಲ ಭದ್ರತಾ ಗುಣಮಟ್ಟವನ್ನು ಅಳವಡಿಸಿಕೊಳ್ಳುವಂತೆ ಇತರರನ್ನು ಪ್ರೋತ್ಸಾಹಿಸಲು ಆಗಿದೆ.