ಜಾಹೀರಾತುಗಳು ಕಾರ್ಯನಿರ್ವಹಿಸುವ ಬಗೆ

ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಯಾರಿಗೂ ಮಾರಾಟ ಮಾಡುವುದಿಲ್ಲ.

ನಾವು ಹೆಚ್ಚಾಗಿ ಜಾಹೀರಾತುಗಳನ್ನು Google ಸೇವೆಗಳು ಹಾಗೂ ನಮ್ಮೊಂದಿಗೆ ಪಾಲುದಾರರಾಗಿರುವ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ತೋರಿಸುತ್ತೇವೆ. ನಮ್ಮ ಸೇವೆಗಳು ಪ್ರತಿಯೊಬ್ಬರಿಗೂ ಉಚಿತವಾಗಿ ದೊರೆಯುವಂತೆ ಮಾಡುವಲ್ಲಿ ನಮ್ಮ ಜಾಹೀರಾತುಗಳು ಸಾಕಷ್ಟು ಸಹಾಯ ಮಾಡುತ್ತವೆ. ನಿಮಗೆ ಈ ಜಾಹೀರಾತುಗಳನ್ನು ತೋರಿಸಲು ನಾವು ಡೇಟಾವನ್ನು ಬಳಸಿಕೊಳ್ಳುತ್ತೇವೆ, ಹಾಗೆಂದು, ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಹಣಕಾಸು ಪಾವತಿಯ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನಾವು ಬೇರಾರಿಗೂ ಮಾರಾಟ ಮಾಡುವುದಿಲ್ಲ.

ಜಾಹೀರಾತುಗಳನ್ನು ಪ್ರಸ್ತುತವಾಗಿಸಲು ನಾವು ಡೇಟಾವನ್ನು ಬಳಸುತ್ತೇವೆ

ನೀವು ನಡೆಸಿದ ಹುಡುಕಾಟಗಳು ಹಾಗೂ ಸ್ಥಳ, ನೀವು ಭೇಟಿ ನೀಡಿದ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು, ನೀವು ನೋಡಿದ ಜಾಹೀರಾತುಗಳು ಹಾಗೂ ವೀಡಿಯೊಗಳು ಮತ್ತು ನೀವು ನಮಗೆ ನೀಡಿದ ವೈಯಕ್ತಿಕ ಮಾಹಿತಿಗಳಾದ ನಿಮ್ಮ ವಯಸ್ಸು,ಸ್ತ್ರೀ/ಪುರುಷ ಮಾಹಿತಿ ಮತ್ತು ನಿಮ್ಮ ಆಸಕ್ತಿಯ ಸಂಗತಿಗಳನ್ನು ಒಳಗೊಂಡಂತೆ ನಿಮ್ಮ ಸಾಧನಗಳಿಂದ ಸಂಗ್ರಹಿಸಲಾದ ಡೇಟಾವನ್ನು ಬಳಸಿಕೊಳ್ಳುವ ಮೂಲಕ ನಾವು ನಿಮಗೆ ಉಪಯುಕ್ತ ಎನಿಸಬಹುದಾದ ಜಾಹೀರಾತುಗಳನ್ನು ತೋರಿಸಲು ಪ್ರಯತ್ನಿಸುತ್ತೇವೆ.

ನೀವು ಸೈನ್‌ ಇನ್ ಆಗಿದ್ದರೆ, ನಿಮ್ಮ ಜಾಹೀರಾತುಗಳ ಸೆಟ್ಟಿಂಗ್‌ಗಳ ಆಧಾರದ ಮೇಲೆ, ಈ ಡೇಟಾವು ನಿಮ್ಮೆಲ್ಲಾ ಸಾಧನಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳ ಮೇಲೆ ಪ್ರಭಾವ ಬೀರುತ್ತದೆ. ಅಂದರೆ, ನಿಮ್ಮ ಕೆಲಸದ ನಡುವೆ ಕಂಪ್ಯೂಟರ್‌ನಲ್ಲಿ ಪ್ರವಾಸದ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ನಿಮಗೆ ನಿಮ್ಮ ಫೋನ್‌ನಲ್ಲಿ ತಡರಾತ್ರಿ ಪ್ಯಾರಿಸ್‌ನ ವಿಮಾನದರಗಳ ಕುರಿತ ಜಾಹೀರಾತುಗಳು ಕಾಣಿಸಿಕೊಳ್ಳಬಹುದು.

ಜಾಹೀರಾತುದಾರರು, ಜನರು ನೋಡುವ ಅಥವಾ ಟ್ಯಾಪ್ ಮಾಡುವ ಜಾಹೀರಾತುಗಳಿಗೆ ಮಾತ್ರ ಹಣ ಪಾವತಿಸುತ್ತಾರೆ

ಜಾಹೀರಾತುದಾರರು ನಮ್ಮಲ್ಲಿ ಜಾಹೀರಾತು ತೋರಿಸಿದಾಗ, ಆ ಜಾಹೀರಾತುಗಳು ಹೇಗೆ ಕಾರ್ಯ ನಿರ್ವಹಿಸಿದವು ಎಂಬುದರ ಆಧಾರದ ಮೇಲೆ ಮಾತ್ರ ನಮಗೆ ಪಾವತಿಸುತ್ತಾರೆಯೇ ಹೊರತು ನಿಮ್ಮ ವೈಯಕ್ತಿಕ ಮಾಹಿತಿಯ ಆಧಾರದ ಮೇಲೆ ಖಂಡಿತ ಅಲ್ಲ. ಅಂದರೆ, ಯಾರಾದರೂ ಪ್ರತಿಬಾರಿ ಜಾಹೀರಾತನ್ನು ವೀಕ್ಷಿಸುವುದು, ಟ್ಯಾಪ್ ಮಾಡುವುದು ಅಥವಾ ಆ ಜಾಹೀರಾತನ್ನು ನೋಡಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಅಥವಾ ವಿನಂತಿ ಫಾರ್ಮ್ ಅನ್ನು ಭರ್ತಿ ಮಾಡುವಂಥ ಕ್ರಿಯೆಗಳನ್ನು ಇದು ಒಳಗೊಂಡಿರಬಹುದು.

ಜಾಹೀರಾತು ಪ್ರಚಾರಗಳು ಎಷ್ಟು ಚೆನ್ನಾಗಿ ಕಾರ್ಯ ನಿರ್ವಹಿಸಿವೆ ಎಂಬುದನ್ನು ಅದರ ಜಾಹೀರಾತುದಾರರಿಗೆ ತೋರಿಸುತ್ತೇವೆ

ನಾವು ಜಾಹೀರಾತುದಾರರಿಗೆ ಅವರ ಜಾಹೀರಾತಿನ ಕಾರ್ಯನಿರ್ವಹಣೆಗೆ ಸಂಬಂಧಪಟ್ಟ ಡೇಟಾವನ್ನು ನೀಡುತ್ತೇವೆ. ಆದರೆ ನಿಮ್ಮ ಯಾವುದೇ ವೈಯಕ್ತಿಕವಾದ ಮಾಹಿತಿಯನ್ನು ಅವರಿಗೆ ಬಹಿರಂಗಪಡಿಸುವುದಿಲ್ಲ. ನಿಮಗೆ ಜಾಹೀರಾತುಗಳನ್ನು ತೋರಿಸುವ ಪ್ರಕ್ರಿಯೆಯ ಪ್ರತಿ ಹಂತದಲ್ಲಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ರಕ್ಷಿಸುತ್ತೇವೆ ಮತ್ತು ಖಾಸಗಿಯಾಗಿ ಇರಿಸುತ್ತೇವೆ.

Google ಸೇವೆಗಳಲ್ಲಿ ಮತ್ತು ಪಾಲುದಾರ ಸೈಟ್‌ಗಳಲ್ಲಿ ಜಾಹೀರಾತುಗಳು ಕಾರ್ಯನಿರ್ವಹಿಸುವ ಬಗೆ

ನಿಮಗೆ ಪ್ರಯೋಜನಕಾರಿಯಾದ ಜಾಹೀರಾತುಗಳನ್ನು ತೋರಿಸಲು ಡೇಟಾವನ್ನು ಬಳಸಿಕೊಳ್ಳುತ್ತೇವೆ. ಆ ಜಾಹೀರಾತುಗಳು, Google ಸೇವೆಗಳಿಗೆ ಸಂಬಂಧಪಟ್ಟಿರಬಹುದು ಅಥವಾ ನಮ್ಮ ಜೊತೆಗೆ ಪಾಲುದಾರರಾದ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿರಬಹುದು.

ಬ್ರೌಸರ್‌ ವಿಂಡೋದಲ್ಲಿ ವಿವಿಧ ಬಣ್ಣದ ಬೈಕ್‌ಗಳು

ಹುಡುಕಾಟ ಜಾಹೀರಾತುಗಳು ಕಾರ್ಯ ನಿರ್ವಹಿಸುವ ಬಗೆ

ನೀವು Google ಹುಡುಕಾಟ ಬಳಸಿದಾಗ, ಜಾಹೀರಾತುಗಳು ಸಂಬಂಧಿತ ಹುಡುಕಾಟ ಫಲಿತಾಂಶಗಳ ಮುಂದೆ ಅಥವಾ ಮೇಲೆ ಕಾಣಿಸಿಕೊಳ್ಳಬಹುದು. ಬಹುತೇಕ ಬಾರಿ, ಈ ಜಾಹೀರಾತುಗಳನ್ನು ನೀವು ಕ್ಷಣದ ಹಿಂದೆ ನಡೆಸಿದ ಹುಡುಕಾಟಗಳು ಮತ್ತು ನಿಮ್ಮ ಸ್ಥಳದ ಮೂಲಕ ಪ್ರಾಂಪ್ಟ್ ಮಾಡಲಾಗಿರುತ್ತದೆ. ಉದಾಹರಣೆಗೆ, ನೀವು ''ಬೈಕ್‌ಗಳು'' ಎಂದು ಹುಡುಕಿದಾಗ, ನಿಮ್ಮ ಹತ್ತಿರದಲ್ಲಿ ಮಾರಾಟಕ್ಕಿರುವ ಬೈಸಿಕಲ್‌‌ಗಳ ಜಾಹೀರಾತುಗಳನ್ನು ನೀವು ನೋಡಬಹುದು.

ಇತರೆ ಸಂದರ್ಭಗಳಲ್ಲಿ, ಇನ್ನಷ್ಚು ಉಪಯುಕ್ತ ಜಾಹೀರಾತುಗಳನ್ನು ನೀಡಲು ನಾವು ನಿಮ್ಮ ಹಿಂದಿನ ಹುಡುಕಾಟಗಳು ಅಥವಾ ನೀವು ಭೇಟಿ ನೀಡಿದ ಸೈಟ್‌ಗಳಂತಹ ಹೆಚ್ಚುವರಿ ಡೇಟಾವನ್ನು ಬಳಸಿಕೊಳ್ಳುತ್ತೇವೆ. ನೀವು ಈಗಾಗಲೇ “ಬೈಕ್‌ಗಳು” ಎಂದು ಹುಡುಕಿದ್ದರೆ, ಈಗ ನೀವು “ರಜೆಗಳು” ಎಂದು ಹುಡುಕಿದಾಗ, ರಜೆಗಳಲ್ಲಿ ಬೈಕಿಂಗ್‌ಗೆ ಹೋಗುವ ಸೂಕ್ತ ಸ್ಥಳಗಳ ಜಾಹಿರಾತುಗಳನ್ನು ನೋಡಬಹುದು.

ಹಳದಿ ಬಣ್ಣದಲ್ಲಿ ಎದ್ದುಕಾಣಿಸಲಾದ Gmail ನಲ್ಲಿನ Google ಜಾಹೀರಾತುಗಳು

YouTube ಜಾಹೀರಾತುಗಳು ಕಾರ್ಯ ನಿರ್ವಹಿಸುವ ಬಗೆ

ನೀವು YouTube ನಲ್ಲಿ ವೀಡಿಯೊಗಳನ್ನು ವೀಕ್ಷಿಸಿದಾಗ, ವೀಡಿಯೊ ಪ್ಲೇ ಆಗುವುದಕ್ಕೂ ಮುನ್ನ ಅಥವಾ ವೀಡಿಯೊ ಪುಟದಲ್ಲಿ ಜಾಹೀರಾತುಗಳು ಪ್ಲೇ ಆಗುವುದನ್ನು ನೀವು ನೋಡಬಹುದು. ನೀವು ವೀಕ್ಷಿಸಿದ ವೀಡಿಯೊಗಳು ಮತ್ತು ನಿಮ್ಮ ಪ್ರಸ್ತುತ ಹಾಗೂ ಇತ್ತೀಚಿನ YouTube ಹುಡುಕಾಟಗಳಂತಹ ಇತರ ಡೇಟಾಗಳನ್ನು ಈ ಜಾಹೀರಾತುಗಳು ಆಧರಿಸಿರುತ್ತವೆ.

ಉದಾಹರಣೆಗೆ, ನೀವು “ಫ್ಯಾಷನ್ ಸಲಹೆಗಳು” ಅನ್ನು ಹುಡುಕುತ್ತಿರುವಾಗ ಅಥವಾ ಸೌಂದರ್ಯ ಸಂಬಂಧಿತ ವೀಡಿಯೊಗಳನ್ನು ವೀಕ್ಷಿಸುತ್ತಿರುವಾಗ, ನೀವು ಹೊಸ ಸೌಂದರ್ಯ ಸರಣಿಗಳ ಜಾಹೀರಾತನ್ನು ನೋಡಬಹುದು. ಈ ಜಾಹೀರಾತುಗಳು ನೀವು ವೀಕ್ಷಿಸಿದ ವೀಡಿಯೊಗಳ ರಚನೆಕಾರರಿಗೆ ಬೆಂಬಲಿಸುವಲ್ಲಿ ಸಹಾಯ ಮಾಡುತ್ತದೆ.

YouTube ಜಾಹೀರಾತುಗಳನ್ನು ನೋಡಲು ಇಷ್ಟವಿಲ್ಲವಾದರೆ ಅವುಗಳನ್ನು ನೀವು ಸ್ಕಿಪ್ ಮಾಡಬಹುದು.

ವೀಡಿಯೊ ಟ್ರೆಂಡಿ ಸನ್‌ಗ್ಲಾಸ್‌ಗಳಿಗೆ ಪಾಪ್-ಅಪ್ ಜಾಹೀರಾತು ಹೊಂದಿರುವ ಸಂತೋಷಭರಿತ ಮಹಿಳೆಯ YouTube ವೀಡಿಯೊ

Gmail ಜಾಹೀರಾತುಗಳು ಕಾರ್ಯ ನಿರ್ವಹಿಸುವ ಬಗೆ

ನೀವು Gmail ನಲ್ಲಿ ವೀಕ್ಷಿಸಿದ ಜಾಹೀರಾತುಗಳು ನಿಮ್ಮ Google ಖಾತೆಯೊಂದಿಗೆ ಸಂಯೋಜನೆಗೊಂಡಿರುವ ಡೇಟಾವನ್ನು ಆಧರಿಸಿವೆ. ಉದಾಹರಣೆಗೆ, ಇತರ Google ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯಾದ YouTube ಅಥವಾ ಹುಡುಕಾಟವು Gmail ನಲ್ಲಿ ನೀವು ವೀಕ್ಷಿಸುವ ಜಾಹೀರಾತುಗಳ ಮೇಲೆ ಪರಿಣಾಮ ಬೀರಬಹುದು. Google ನಿಮಗೆ ಜಾಹೀರಾತುಗಳನ್ನು ತೋರಿಸಲು ನಿಮ್ಮ ಇನ್‌ಬಾಕ್ಸ್‌ನಲ್ಲಿರುವ ಕೀವರ್ಡ್‌ಗಳು ಅಥವಾ ಸಂದೇಶಗಳನ್ನು ಬಳಕೆಮಾಡುವುದಿಲ್ಲ. ನಿಮಗೆ ಜಾಹೀರಾತುಗಳನ್ನು ತೋರಿಸುವ ಸಲುವಾಗಿ ಬೇರಾರೂ ನಿಮ್ಮ ಇಮೇಲ್‌ಗಳನ್ನು ಓದಲು ಸಾಧ್ಯವಿಲ್ಲ.

ಪ್ರೊಫೈಲ್ ಫೋಟೋ ಹೊಂದಿದ ಬ್ರೌಸರ್ ಸೊಗಸಾದ ಹಸಿರು ಚೀಲದ ಜಾಹೀರಾತು ಹೊಂದಿದೆ

Google ಪಾಲುದಾರರ ಸೈಟ್‌ಗಳಲ್ಲಿ ಜಾಹೀರಾತುಗಳು ಕಾರ್ಯ ನಿರ್ವಹಿಸುವ ಬಗೆ

ಹಲವಾರು ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು ಜಾಹೀರಾತುಗಳನ್ನು ತೋರಿಸಲು ನಮ್ಮೊಂದಿಗೆ ಪಾಲುದಾರರಾಗಿದ್ದಾರೆ. ನಮ್ಮ ಬಳಕೆದಾರರು ನಮ್ಮೊಂದಿಗೆ ಹಂಚಿಕೊಂಡ ವೈಯಕ್ತಿಕ ಮಾಹಿತಿ ಮತ್ತು ನಿಮ್ಮ ಆನ್‌ಲೈನ್ ಚಟುವಟಿಕೆಗಳ ಕುರಿತು ನಾವು ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಈ ಜಾಹೀರಾತುದಾರರು ಪ್ರೇಕ್ಷಕ “ಪ್ರಕಾರಗಳಿಗೆ” ನೀಡಿರುವ ಜಾಹೀರಾತುಗಳನ್ನು ತೋರಿಸಲು ನಿರ್ಧರಿಸಬಹುದು. ಉದಾಹರಣೆಗೆ, “ಪ್ರಯಾಣದಲ್ಲಿ ಆಸಕ್ತಿಯಿರುವ 25 - 34 ವರ್ಷದ ಪುರುಷರು.”

ನೀವು ಈ ಹಿಂದೆ ಭೇಟಿಯಾದ ಸೈಟ್‌ಗಳ ಆಧಾರದ ಮೇಲೆ ಕೂಡಾ ನಾವು ನಿಮಗೆ ಜಾಹೀರಾತುಗಳನ್ನು ತೋರಿಸಬಹುದು — ಉದಾಹರಣೆಗೆ, ನಿಮ್ಮ ಆನ್‌ಲೈನ್ ಶಾಪಿಂಗ್ ಕಾರ್ಟ್‌ಗೆ ಸೇರಿಸಿದ ಆದರೆ ಖರೀದಿಸದಿರುವ ಆ ಕೆಂಪು ಶೂಗಳ ಜಾಹೀರಾತುಗಳನ್ನು ನೀವು ಕಾಣಬಹುದು. ಆದರೆ ನಾವು ನಿಮ್ಮ ಹೆಸರು, ಇಮೇಲ್ ವಿಳಾಸ ಅಥವಾ ಬಿಲ್ಲಿಂಗ್ ಮಾಹಿತಿಗಳಂತಹ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸದೇ ಇದನ್ನು ಮಾಡುತ್ತೇವೆ.

Google ಜಾಹೀರಾತುಗಳ ಅನುಭವವನ್ನು ನಿಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಿ

ನೀವು ಸೈನ್‌ ಇನ್‌ ಆಗಿರಲಿ ಅಥವಾ ಸೈನ್ ಔಟ್‌ ಆಗಿರಲಿ, ವೀಕ್ಷಿಸುವ ಜಾಹೀರಾತುಗಳ ಪ್ರಕಾರಗಳನ್ನು ನಿಯಂತ್ರಿಸಲು ನಾವು ಪರಿಕರಗಳನ್ನು ಒದಗಿಸುತ್ತೇವೆ.

ಜಾಹೀರಾತು ಸೆಟ್ಟಿಂಗ್‌ಗಳ ಜೊತೆಗೆ ಟ್ಯಾಬ್ಲೆಟ್ ಮತ್ತು ಸನ್‌ಗ್ಲಾಸ್‌ಗಳಿಗೆ ಜಾಹೀರಾತು

ನಿಮ್ಮ ಆದ್ಯತೆಗಳನ್ನು ಆಧರಿಸಿದ ಜಾಹೀರಾತುಗಳನ್ನು ನಿಯಂತ್ರಿಸಿ

ನಿಮ್ಮ ಜಾಹೀರಾತುಗಳ ಸೆಟ್ಟಿಂಗ್‌ಗಳಲ್ಲಿ, ನಿಮಗೆ ಆಸಕ್ತಿಯಿರುವ ವಿಷಯಗಳ ಆಧಾರದ ಮೇಲೆ ಜಾಹೀರಾತುಗಳನ್ನು ನೀವು ನಿಯಂತ್ರಿಸಬಹುದು. ಉದಾಹರಣೆಗೆ, ನೀವು ಪಾಪ್ ಸಂಗೀತ ಇಷ್ಟಪಡುವುದನ್ನು Google ಗೆ ತಿಳಿಸಲು ಜಾಹೀರಾತುಗಳ ವೈಯಕ್ತೀಕರಣ ಸೆಟ್ಟಿಂಗ್‌ಗಳನ್ನು ನೀವು ಬಳಸಿದರೆ, YouTube ಗೆ ಸೈನ್ ಇನ್ ಮಾಡಿದಾಗ ಮುಂಬರಲಿರುವ ಬಿಡುಗಡೆಗಳು ಮತ್ತು ನಿಮ್ಮ ಸ್ಥಳಕ್ಕೆ ಹತ್ತಿರದ ಪ್ರದರ್ಶನಗಳ ಕುರಿತಾಗಿ ಜಾಹೀರಾತುಗಳನ್ನು ನೀವು ನೋಡಬಹುದು.

ನೀವು ಸೈನ್ ಇನ್ ಮಾಡುವಾಗ ಜಾಹೀರಾತುಗಳ ವೈಯಕ್ತೀಕರಣವನ್ನು ನೀವು ಆಫ್ ಮಾಡಿದರೆ, Google ಸೇವೆಗಳು ಜೊತೆಗೆ ನಮ್ಮೊಂದಿಗೆ ಪಾಲುದಾರರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಾದ್ಯಂತ ನಿಮ್ಮ ಆಸಕ್ತಿಗಳಿಗೆ ಆಧರಿಸಿದ ಜಾಹೀರಾತುಗಳನ್ನು ತೋರಿಸುವುದನ್ನು ನಾವು ನಿಲ್ಲಿಸುತ್ತೇವೆ. ನೀವು ಸೈನ್ ಔಟ್ ಮಾಡಿದರೆ, ಜಾಹೀರಾತುಗಳ ವೈಯಕ್ತೀಕರಣ ಆಫ್ ಮಾಡಿದರೆ ಜಾಹೀರಾತುಗಳನ್ನು ತೋರಿಸುವಲ್ಲಿ Google ಸೇವೆಗಳಿಗೆ ಮಾತ್ರ ಪರಿಣಾಮವಾಗುತ್ತದೆ.

ಮೇಲ್ಭಾಗದಲ್ಲಿ ಮ್ಯೂಟ್ ಬಟನ್ ಜೊತೆಗೆ ಹಸಿರು ಕಾರುಗೆ Google ಜಾಹೀರಾತು

ನೀವು ನೋಡಲು ಬಯಸದ ಜಾಹೀರಾತುಗಳನ್ನು ತೆಗೆದುಹಾಕಿ

ನಮ್ಮ ಪಾಲುದಾರರ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳ ಮೂಲಕ ತೋರಿಸುವ ಅನೇಕ ಜಾಹೀರಾತುಗಳಲ್ಲಿ ಈ ಜಾಹೀರಾತನ್ನು ಮ್ಯೂಟ್ ಮಾಡುವ ಸಾಮರ್ಥ್ಯವನ್ನು ನಾವು ನೀಡುತ್ತೇವೆ. ಜಾಹೀರಾತಿನಲ್ಲಿ ಮೂಲೆಯಲ್ಲಿರುವ “X” ಆಯ್ಕೆ ಮಾಡುವ ಮೂಲಕ, ನಿಮಗೆ ಸಂಬಂಧವಿಲ್ಲದ ಜಾಹೀರಾತುಗಳನ್ನು ತೆಗೆದುಹಾಕಬಹುದು.

ಉದಾಹರಣೆಗೆ, ನೀವು ಹೊಸ ಕಾರನ್ನು ಖರೀದಿಸಲೆಂದು ಮಾರುಕಟ್ಟೆಗೆ ಬಂದಾಗ ಕಾರು ಜಾಹೀರಾತುಗಳು ಪ್ರಯೋಜನಕಾರಿಯಾಗಿರಬಹುದು. ಆದರೆ ಒಮ್ಮೆ ನೀವು ಹೊಸ ಕಾರಿನಲ್ಲಿ ಕೂತು ಜಾಲಿ ರೈಡ್‌ ಮಾಡಿದ ಮೇಲೆ, ಬಹುಶಃ ನೀವು ಖರೀದಿಸಿದ ಆ ಕಾರಿನ ಕುರಿತಾಗಿ Google ನಿಂದ ಇನ್ನಷ್ಟು ಜಾಹೀರಾತುಗಳನ್ನು ನೋಡಲು ನಿಮಗೆ ಇಷ್ಟವಾಗದೇ ಇರಬಹುದು.

ನೀವು ಸೈನ್‌ ಇನ್ ಮಾಡಿದ್ದರೆ, ಜಾಹೀರಾತುಗಳ ಸೆಟ್ಟಿಂಗ್‌ಗಳನ್ನು ಆಧರಿಸಿ, ಈ ನಿಯಂತ್ರಣಗಳು ನಮ್ಮೊಂದಿಗೆ ಪಾಲುದಾರರಾದ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ನೀವು ಸೈನ್-ಇನ್ ಮಾಡಿದ ಸಾಧನಗಳಾದ್ಯಂತ ಪರಿಣಾಮ ಬೀರುತ್ತವೆ.

ಜಾಹೀರಾತುಗಳನ್ನು ತೋರಿಸುವ Google ಸೇವೆಗಳಲ್ಲಿ "ಈ ಜಾಹೀರಾತುದಾರರನ್ನು ನಿರ್ಬಂಧಿಸು" ಅನ್ನು ಬಳಸುವ ಮೂಲಕ ಸೈನ್‌ ಇನ್ ಆಗದೆಯೇ ಆವುಗಳನ್ನು ನೀವು ನಿರ್ಬಂಧಿಸಬಹುದು.

ಮೇಲಿನ ಬಲಭಾಗದಲ್ಲಿ ಮಾಹಿತಿ ಬಟನ್ ಜೊತೆಗೆ ಸನ್‌ಗ್ಲಾಸ್‌ಗಳಿಗೆ ಜಾಹೀರಾತು

ನಿಮಗೆ ಜಾಹೀರಾತುಗಳನ್ನು ತೋರಿಸಲು ಯಾವ ಡೇಟಾವನ್ನು ನಾವು ಬಳಸುತ್ತೇವೆ ಎಂಬುದನ್ನು ತಿಳಿಯಿರಿ

ಜಾಹೀರಾತುಗಳನ್ನು ತೋರಿಸಲು ಬಳಸುವ ಡೇಟಾವನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವು ಸಹಾಯ ಮಾಡುತ್ತೇವೆ. "ಏಕೆ ಈ ಜಾಹೀರಾತು" ಎಂಬುದು ಒಂದು ವೈಶಿಷ್ಟ್ಯವಾಗಿದ್ದು, ಅದು ನಿರ್ಧಿಷ್ಟ ಜಾಹೀರಾತನ್ನು ನೀವು ಏಕೆ ನೋಡುತ್ತಿರುವಿರಿ ಎಂಬುದನ್ನು ತಿಳಿಸಿಕೊಡುವ ಪ್ರಾಂಪ್ಟ್ ಅನ್ನು ಕ್ಲಿಕ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ಉದಾಹರಣೆಗೆ, ನೀವು ಫ್ಯಾಷನ್‌ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿರುವ ಕಾರಣ ಉಡುಪಿನ ಜಾಹೀರಾತುಗಳನ್ನು ನೀವು ನೋಡುತ್ತಿರಬಹುದು. ಅಥವಾ ರೆಸ್ಟೋರೆಂಟ್‌ಗಾಗಿ ನೀವು ಜಾಹೀರಾತನ್ನು ನೋಡಿದಾಗ, ಅಥವಾ, ನಿಮ್ಮ ಸ್ಥಳದ ಕಾರಣದಿಂದ ನೀವು ಅದನ್ನು ಶೋಧಿಸಬಹುದು. ನಿಮಗೆ ಉಪಯುಕ್ತವಿರುವ ವಿಷಯಗಳ ಕುರಿತು ನಿಮಗೆ ಜಾಹೀರಾತು ತೋರಿಸಲು ಈ ಪ್ರಕಾರದ ಡೇಟಾ ನಮಗೆ ಸಹಾಯ ಮಾಡುತ್ತದೆ. ಆದರೆ ನೆನಪಿಡಿ, ನಾವು ಈ ಡೇಟಾವನ್ನು ಜಾಹೀರಾತುದಾರರ ಜೊತೆಗೆ ಹಂಚಿಕೊಳ್ಳುವುದಿಲ್ಲ.